ಉಳ್ಳಾಲ: ಮಳೆ ಹಾನಿ ಪ್ರದೇಶಕ್ಕೆ ಯು.ಟಿ.ಖಾದರ್ ಭೇಟಿ

ಕೊಣಾಜೆ: ಕಳೆದ ಕೆಲವು ದಿನದಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯಾಗಿದ್ದು ಈ ಪ್ರದೇಶಕ್ಕೆ ಬುಧವಾರ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಳ್ಳಾಲದ ಮಂಚಿಲ ಸುಧಾಕರ್ ರವರ ಮನೆಗೆ ಮರಬಿದ್ದು ಹಾನಿಯಾಗಿದ್ದು, ಮಂಚಿಲ ಬಳಿ ಆಲಿಸ್ ವೇಗಸ್ ಎಂಬುವವರ ಮನೆ ಆಕಸ್ಮಿಕ ಬೆಂಕಿಗೆ ಸಂಪೂರ್ಣ ಆಹುತಿಯಾಗಿ ಅಪಾರ ಹಾನಿ ಸಂಭವಿಸಿದೆ. ಮಳೆಯಿಂದಾಗಿ ಉಳ್ಳಾಲ ಹಳೇಕೋಟೆ ಬಳಿ ರಸ್ತೆಗೆ ಕಟ್ಟಲಾದ ಬೃಹತ್ ತಡೆಗೋಡೆ ಕುಸಿದು ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಹಾನಿಗೊಳಗಾದ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭಾ ಸದಸ್ಯರಾದ ಅಯ್ಯೂಬ್ ಮಂಚಿಲ, ಯು.ಎ.ಇಸ್ಮಾಯಿಲ್, ವೀಣಾ ಡಿಸೋಜ, ಬಾಝಿಲ್ ಡಿಸೋಜ, ಅಸ್ಗರ್ ಆಲಿ,ಭಾರತಿ, ಇಬ್ರಾಹಿಮ್ ಅಶ್ರಫ್, ಅಬ್ದುಲ್ ರವೂಫ್ ಮತ್ತು ಅಳೇಕಲ ಸ್ಪೋರ್ಟಿಂಗ್ಸ್ ಅಧ್ಯಕ್ಷ ಉಮ್ಮರ್ ಫಾರೂಕ್, ಉಳ್ಲಾಲ ದರ್ಗಾ ಸಮಿತಿ ಸದಸ್ಯ ಆಶೀಫ್ ಮಾರ್ಗತಲೆ, ಹೆರಾಲ್ಡ್ ಡಿಸೋಜ, ಕಿನ್ಯ ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯ, ಯುವ ಕಾಂಗ್ರೆಸ್ ನ ಟಿ.ಎಸ್. ನಾಸೀರ್ ಸಾಮಾನಿಗೆ ಮೊದಲಾದವರು ಉಪಸ್ಥಿತರಿದ್ದರು.









