ಬಂಟ್ವಾಳ: ಜು. 27ರಂದು ಸಸಿ ನೆಡುವ, ಸಸಿ ವಿತರಿಸುವ ಕಾರ್ಯಕ್ರಮ
ಬಂಟ್ವಾಳ, ಜು. 24: ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಲೊರೆಟ್ಟೋ ಚರ್ಚ್ ವಿದ್ಯಾಸಂಸ್ಥೆಗಳು, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್, ಲೊರೆಟ್ಟೋ ಫ್ರೆಂಡ್ಸ್ ಹಾಗೂ ಕಥೋಲಿಕ್ ಸಭಾ ಲೊರೆಟ್ಟೋ ಘಟಕ ಆಶ್ರಯದಲ್ಲಿ ಬರಮುಕ್ತ ಕರ್ನಾಟಕಕ್ಕಾಗಿ ಸಸಿ ನೆಡುವ ಮತ್ತು ಸಸಿ ವಿತರಿಸುವ ಕಾರ್ಯಕ್ರಮ ಜು. 27ರಂದು ನಡೆಯಲಿದೆ ಎಂದು ರೈತಸಂಘದ ವಲಯಾಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೊರೆಟ್ಟೋ ಮಾತಾ ಸಭಾಭವನದಲ್ಲಿ ಬೆಳಗ್ಗೆ 9.45ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭ ವಿದ್ಯಾರ್ಥಿಗಳಿಗೆ ಸಸಿ ವಿತರಣಾ ಕಾರ್ಯವೂ ನಡೆಯಲಿದೆ ಎಂದರು.
ಧರ್ಮಗುರು ಹಾಗೂ ಶಾಲಾ ಸಂಚಾಲಕ ವಂ.ಎಲಿಯಾಸ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅತಿಥಿಗಳಾಗಿ ರಾಜ್ಯ ರೈತ ಸಂಘ ಕಾರ್ಯದರ್ಶಿ ರವಿಕಿರಣ್ ಪುಣಚ, ರೋಟರಿ ಲೊರೆಟ್ಟೋ ಹಿಲ್ಸ್ ನಿಕಟಪೂರ್ವ ಅಧ್ಯಕ್ಷ ಅವಿಲ್ ಮಿನೇಜಸ್, ಲೊರೆಟ್ಟೊ ಚರ್ಚ್ ಪಾಲನಾ ಪರಿಷತ್ತು ಉಪಾಧ್ಯಕ್ಷ ರಿಚರ್ಡ್ ಮಿನೇಜಸ್, ತಾಲೂಕು ರೈತಸಂಘ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಯಾಗಿ ದಿಶಾ ಟ್ರಸ್ಟ್ ನ ಸಿಲ್ವೆಸ್ಟರ್ ಡಿಸೋಜ ಪಾಲ್ಗೊಳ್ಳುವರು ಎಂದರು.
ಈ ಸಂದರ್ಭ ಲೊರೆಟ್ಟೋ ಫ್ರೆಂಡ್ಸ್ ಅಧ್ಯಕ್ಷ ಪ್ರವೀಣ್ ಪಿಂಟೊ, ಮುಖಂಡರಾದ ವಿವಿಯನ್ ಪಿಂಟೊ, ಅಲೆಕ್ಸ್ ರೋಡ್ರಿಗಸ್ ಉಪಸ್ಥಿತರಿದ್ದರು.







