ಲೈಂಗಿಕ ಕಿರುಕುಳ ವಿರುದ್ಧ ಕಾನೂನು: ಸಚಿವರ ತಂಡದ ಪುನರ್‌ರಚನೆ
ಹೊಸದಿಲ್ಲಿ, ಜು.24: ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ತಡೆಯುವ ಬಗ್ಗೆ ಹಾಗೂ ಈ ಕುರಿತ ಕಾನೂನನ್ನು ಬಿಗಿಗೊಳಿಸಲು ರಚಿಸಲಾದ ಸಚಿವರ ತಂಡವನ್ನು ಸರಕಾರ ಪುನರ್‌ರಚಿಸಿದೆ.
ಈ ಹಿಂದಿನ ಸಮಿತಿಯಲ್ಲಿ ರಾಜನಾಥ್ ಸಿಂಗ್ ಇದ್ದರೆ ಈಗ ಅವರ ಬದಲು ಗೃಹ ಸಚಿವ ಅಮಿತ್ ಶಾ ಸೇರ್ಪಡೆಗೊಂಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಾನವ ಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಪೊಖ್ರಿಯಲ್ ‘ನಿಶಾಂಕ್’ ಹಾಗೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಅವರು ಇತರ ಸದಸ್ಯರಾಗಿದ್ದಾರೆ.
ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ತಡೆಯುವ ಮತ್ತು ಈ ಕುರಿತ ಕಾನೂನನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ 2018ರ ಅಕ್ಟೋಬರ್‌ನಲ್ಲಿ ಸಚಿವರ ತಂಡವನ್ನು ರಚಿಸಲಾಗಿತ್ತು. ಹೊಸ ಸರಕಾರ ರಚನೆಯಾಗುವುದರೊಂದಿಗೆ ಸಚಿವರ ತಂಡವು ಸಂಬಂಧಿಸಿದವರೊಂದಿಗೆ ಸಮಾಲೋಚಿಸಿ, ಇದುವರೆಗೆ ಬಂದಿರುವ ವಿವಿಧ ಸಲಹೆಗಳನ್ನು ಪರಿಶೀಲಿಸುತ್ತಿದೆ ಎಂದು ಗೃಹ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
Next Story





