ಬ್ರಿಟನ್ ಪ್ರಧಾನಿ ತೆರೇಸಾ ಮೇ ರಾಜೀನಾಮೆ

ಲಂಡನ್, ಜು. 24: ಬ್ರಿಟನ್‌ನ ನಿರ್ಗಮನ ಪ್ರಧಾನಿ ತೆರೇಸಾ ಮೇ ಬುಧವಾರ ತನ್ನ ರಾಜೀನಾಮೆ ಪತ್ರವನ್ನು ಔಪಚಾರಿಕವಾಗಿ ರಾಣಿ ದ್ವಿತೀಯ ಎಲಿಝಬೆತ್‌ಗೆ ಸಲ್ಲಿಸಿದ್ದಾರೆ.
ನೂತನ ಪ್ರಧಾನಿಯಾಗಿ ಮಾಜಿ ವಿದೇಶ ಕಾರ್ಯದರ್ಶಿ ಬೊರಿಸ್ ಜಾನ್ಸನ್ ಅಧಿಕಾರ ಸ್ವೀಕರಿಸಲಿದ್ದಾರೆ.
ತೆರೇಸಾ ಬ್ರಿಟನ್‌ನ ಅತ್ಯಂತ ಕಿರು ಅವಧಿಯ ಪ್ರಧಾನಿಗಳಲ್ಲಿ ಓರ್ವರಾಗಿದ್ದಾರೆ. ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹೊರ ತರುವ ಭರವಸೆಯೊಂದಿಗೆ ತೆರೇಸಾ 2016ರಲ್ಲಿ ಪ್ರಧಾನಿಯಾದರು. ಅವರು 1,106 ದಿನಗಳ ಕಾಲ ಅಧಿಕಾರದಲ್ಲಿದ್ದರು. ಇದು ಗೋರ್ಡನ್ ಬ್ರೌನ್ (2007-10; 1,049 ದಿನಗಳು) ಮತ್ತು ನೆವಿಲ್ ಚ್ಯಾಂಬರ್‌ಲೈನ್ (1937-40; 1,078 ದಿನಗಳು)ರ ಅವಧಿಗಿಂತ ಸ್ವಲ್ಪ ಅಧಿಕವಾಗಿದೆ.
Next Story





