ಚೀನಾದಲ್ಲಿ ಭೂಕುಸಿತ: 14 ಸಾವು; 42 ಮಂದಿ ನಾಪತ್ತೆ

ಬೀಜಿಂಗ್, ಜು. 24: ನೈರುತ್ಯ ಚೀನಾದಲ್ಲಿ ಸಂಭವಿಸಿದ ಎರಡು ಭೂಕುಸಿತಗಳಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಪತ್ತೆಯಾಗಿರುವ 42 ಮಂದಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಚೀನಾದ ಸರಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.
ಗುಯಿಝೂ ಪ್ರಾಂತದ ಶುಯಿಚೆಂಗ್ ಕೌಂಟಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ 21 ಮನೆಗಳು ಭೂಸಮಾಧಿಯಾಗಿವೆ ಹಾಗೂ ಕನಿಷ್ಠ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರಕಾರಿ ಟಿವಿ ಸಿಸಿಟಿವಿ ತಿಳಿಸಿದೆ.
11 ಮಂದಿಯನ್ನು ರಕ್ಷಿಸಲಾಗಿದ್ದು, 42 ಮಂದಿ ನಾಪತ್ತೆಯಾಗಿದ್ದಾರೆ. 800ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಹುಡುಕಾಡುತ್ತಿದ್ದಾರೆ.
ಗುಯಿಝೂ ಪ್ರಾಂತದ ಹೆಝಾಂಗ್ ಕೌಂಟಿಯ ಗ್ರಾಮವೊಂದರಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭೂಕುಸಿತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ನಾಪತ್ತೆಯಾಗಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ವಾಶಿಂಗ್ಟನ್‌ನಲ್ಲಿರುವ ಕ್ಯಾಪಿಟೋಲ್ ಹಿಲ್‌ನಲ್ಲಿ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿಯನ್ನು ಭೇಟಿಯಾದರು.





