ಸಂಸತ್‌ನಲ್ಲಿ ‘ಮಸೂದ್ ಅಝರ್ ಜಿ’ಎಂದ ಬಿಜೆಪಿ ಸಂಸದ

ಹೊಸದಿಲ್ಲಿ,ಜು.24: ಲೋಕಸಭೆಯಲ್ಲಿ ಬುಧವಾರ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಗೆ ತಿದ್ದುಪಡಿಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುವ ಭರದಲ್ಲಿ ಜಾರ್ಖಂಡ್‌ನ ಬಿಜೆಪಿ ಸಂಸದ ವಿಷ್ಣು ದಯಾಳ ರಾಮ್ ಅವರು ಪಾಕ್ ಮೂಲದ ಭಯೋತ್ಪಾದಕ ಮಸೂದ್ ಅಝರ್ ಹೆಸರಿಗೆ ‘ಜಿ’ ಸೇರಿಸುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ.
ಆದರೆ ಕ್ಷಣಾರ್ಧದಲ್ಲಿ ತನ್ನ ತಪ್ಪನ್ನು ಅರಿತ ರಾಮ್ ಮಾತು ಮುಂದುವರಿಸುವ ಮುನ್ನ ಅದನ್ನು ತಿದ್ದಿಕೊಂಡರು.
“ಐಸಿಸ್‌ಗೆ ಉಗ್ರರನ್ನು ಭರ್ತಿ ಮಾಡುತ್ತಿರುವ ಶಫಿ ಅರ್ಮಾನ್ ಮತ್ತು ಕರ್ನಾಟಕದ ಭಟ್ಕಳ ಮೂಲದ ಮಸೂದ್ ಅಝರ್‘ಜಿ’ಯನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಬೇಕು. ಮಸೂದ್ ಅಝರ್ ಹಿಜ್ಬುಲ್ ಮುಜಾಹಿದೀನ್‌ನ ಮುಖ್ಯಸ್ಥನಾಗಿದ್ದಾನೆ. ಇವರನ್ನು ಭಯೋತ್ಪಾದಕರಂದು ಘೋಷಿಸದಿದ್ದರೆ ಮತ್ತೇನೆಂದು ಕರೆಯಲಾಗುತ್ತದೆ’ ಎಂದು ಮಾಜಿ ಡಿಜಿಪಿಯೂ ಆಗಿರುವ ರಾಮ್ ಪ್ರಶ್ನಿಸಿದರು.
ಈ ಹಿಂದೆ ವೀಡಿಯೊವೊಂದರಲ್ಲಿ ಹಿರಿಯ ಬಿಜೆಪಿ ನಾಯಕ ರವಿಶಂಕರ ಪ್ರಸಾದ ಅವರು,ಲಷ್ಕರೆ ತೈಬಾದ ಮುಖ್ಯಸ್ಥ ಹಫೀಝ್ ಸಯೀದ್ ನನ್ನು ‘ಹಫೀಝ್ ಜಿ’ ಎಂದು ಉಲ್ಲೇಖಿಸಿದ್ದು,ಇದು ಬಿಎಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು.
ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಒಸಾಮಾ ಬಿನ್ ಲಾಡೆನ್‌ನನ್ನು ‘ಒಸಾಮಾಜಿ’ ಮತ್ತು ಹಫೀಝ್ ಸಯೀದ್‌ಗೆ ‘ಸಾಹಬ್’ ಹೇಳಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಮಸೂದ್ ಅಝರ್‘ಜಿ’ಎಂದು ಉಲ್ಲೇಖಿಸಿ ಯಡವಟ್ಟು ಮಾಡಿಕೊಂಡಿದ್ದರು.







