ಸೌರಶಕ್ತಿ ಚಾಲಿತ ಸೈಕಲ್ ಮಾದರಿ ತಯಾರಿಸಿದ ಕುಂದಾಪುರದ ಶ್ರೀಶ

ಕುಂದಾಪುರ, ಜು.25: ಪರ್ಯಾಯ ಮೂಲಗಳಿಂದ ಯಾಂತ್ರಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶಕ್ತಿಯನ್ನು ಉತ್ಪಾದಿಸಿ ಬಳಸುವ ಸಂಶೋಧನೆಗೆ ವಿಪುಲ ಅವಕಾಶವಿರುವ ಇಂದಿನ ಕಾಲದಲ್ಲಿ, ಇನ್ನೂ ಚಿಗುರು ಮೀಸೆ ಮೂಡದ ಬಾಲಕನೊಬ್ಬ ಸೌರಶಕ್ತಿ ಚಾಲಿತ ಸೈಕಲ್ ಮಾದರಿ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕುಂದಾಪುರ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಶ್ರೀಶ ಶೆಟ್ಟಿ ಈ ಸೈಕಲ್‌ನ್ನು ತಯಾರಿಸಿದ್ದು, ಇವುಗಳನ್ನು ಕಾಲೇಜಿನ ಅಧ್ಯಾಪಕರೆದುರು ಪ್ರದರ್ಶಿಸಿದ್ದಾರೆ.
ಮಾಲಿನ್ಯ ರಹಿತವಾದ ಈ ಸೌರಶಕ್ತಿ ಚಾಲಿತ ಸೈಕಲ್ ಪ್ರಾಯೋಗಿಕ ಪರೀಕ್ಷೆ ಯಲ್ಲಿ ಯಶಸ್ಸು ಕಂಡರೆ, ಖಂಡಿತವಾಗಿ ಮಾನವನ ನಿತ್ಯ ಬಳಕೆಗೆ ಅಮೂಲ್ಯ ಕೊಡುಗೆಯಾಗಲಿದೆ. ಶ್ರೀಶ ಶೆಟ್ಟಿಯ ಈ ಮಾದರಿ ಸೈಕಲ್‌ನ್ನು ಕಾಲೇಜಿನಲ್ಲಿ ಪ್ರದರ್ಶಿಸಿ, ಪ್ರಾತ್ಯಕ್ಷಿಕೆಯನ್ನೂ ನೀಡಿದ್ದಾನೆ. ಆತನ ಈ ಪ್ರಯತ್ನವನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕರು ಶ್ಲಾಘಿಸಿದ್ದಾರೆ.
Next Story





