ಪುತ್ತೂರು: ನಗರಸಭಾ ಪೌರಾಯುಕ್ತರಿಂದ ಮುಂದುವರಿದ ಪಿ.ಜಿ. ಕಾರ್ಯಾಚರಣೆ

ಪುತ್ತೂರು: ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಪುತ್ತೂರು ನಗರದಲ್ಲಿನ ಪಿ.ಜಿ.ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಅವರು ಗುರುವಾರವೂ ದಾಳಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಪೌರಾಯುಕ್ತರು ನೆಹರೂ ನಗರದಲ್ಲಿನ ಮೂರು ಪಿ.ಜಿ.ಗಳಿಗೆ ದಾಳಿ ನಡೆಸಿ ಪರವಾನಿಗೆ ಹಾಗೂ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮೂರು ಪಿ.ಜಿ.ಗಳಲ್ಲಿಯೂ ಮೂಲ ಸೌಕರ್ಯದ ಕೊರತೆ ತನಿಖೆಯಿಂದ ಬೆಳಕಿಗೆ ಬಂದಿದೆ. ಇಕ್ಕಟ್ಟಾದ ಕೊಠಡಿ, ಗಾಳಿ ಬರಲು ಅಸಮರ್ಪಕ ವ್ಯವಸ್ಥೆ, ಶೌಚಾಲಯ ಮತ್ತು ಸ್ನಾನಗೃಹಗಳ ಮತ್ತು ಸ್ವಚ್ಚತೆಯ ಕೊರತೆ ಮತ್ತಿತರ ಅಂಶಗಳು ತನಿಖಾ ತಂಡ ದಾಖಲು ಮಾಡಿಕೊಂಡಿದೆ. ಅಲ್ಲದೆ ಅವರು ಪರವಾನಿಗೆ ಹಾಜರು ಪಡಿಸದ ಹಿನ್ನಲೆಯಲ್ಲಿ ನಗರಸಭೆಯಿಂದ ನೋಟೀಸ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
Next Story





