ಕಾರು ಢಿಕ್ಕಿ; ವೃದ್ಧೆ ಸಾವು
ಬ್ರಹ್ಮಾವರ, ಜು.25: ಹಂದಾಡಿ ಗ್ರಾಮದ ಸಾಯಿಬಾಬಾ ಹೊಟೇಲಿನ ಎದುರುಗಡೆ ಕುಂದಾಪುರ-ಉಡುಪಿ ರಾ.ಹೆದ್ದಾರಿ 66ರ ಪೂರ್ವಬದಿಯ ಮಣ್ಣು ರಸ್ತೆಯ ಬದಿಯಲ್ಲಿ ನಿಂತಿದ್ದ ಐರೋಡಿ ಗ್ರಾಮದ ಕರ್ಕಿಬೈಲಿನ ಐರಿನ್ ಡಿಸಿಲ್ವ (70) ಎಂಬವರಿಗೆ ಕುಂದಾಪುರದ ಕಡೆಯಿಂದ ವೇಗವಾಗಿ ಬಂದ ಸ್ವಿಪ್ಟ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಇಂದು ಅಪರಾಹ್ನ 12:30ರ ಸುಮಾರಿಗೆ ನಡೆದಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





