ಶಿವಮೊಗ್ಗ ಮೂಲದ ವ್ಯಕ್ತಿ ಮೃತ್ಯು: ವಾರಸುದಾರರ ಪತ್ತೆಗೆ ಮನವಿ

ಮಂಗಳೂರು, ಜು.25: ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ನಿವಾಸಿ ಚಂದ್ರು (44) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಜು.24ರಂದು ರಾತ್ರಿ 9:29ಕ್ಕೆ ಚಂದ್ರು ಆಸ್ಪತ್ರೆಗೆ ದಾಖಲಾಗಿದ್ದಾರೆ. 9:40ರ ಸುಮಾರು ಪರೀಕ್ಷಿಸಿದ ವೈದ್ಯರು ಚಂದ್ರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಚಹರೆ: ಐದು ಅಡಿ ಎತ್ತರ, ಕಪ್ಪು ಮೈಬಣ್ಣ, ಶರ್ಟ್ ಮತ್ತು ಪ್ಯಾಂಟ್ ಧರಿಸಿರುತ್ತಾರೆ. ಮೃತರ ಸಂಬಂಧಿಕರು ಇದ್ದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824- 2220518, 9480805339) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





