ಮಂಗಳೂರಿನಲ್ಲಿ ಇಸುಝು ಗ್ರಾಹಕರ ಸಮ್ಮೇಳನ

ತಕೇಶಿ ಹಿರಾನೊ ಅವರು ವಾಹನದ ಕೀಲಿ ಕೈಯನ್ನು ಗ್ರಾಹಕರಿಗೆ ಹಸ್ತಾಂತರಿಸಿದರು.
ಮಂಗಳೂರು : ಇಸುಝು ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಡಿ-ಮ್ಯಾಕ್ಸ್ ಗ್ರಾಹಕರಿಗಾಗಿ ನಗರದ ಕೊಡಿಯಾಲ್ಬೈಲಿನಲ್ಲಿರುವ ಓಶಿಯನ್ ಪರ್ಲ್ನಲ್ಲಿ ಗ್ರಾಹಕರ ಸಮ್ಮೇಳನವನ್ನು ಆಯೋಜಿಸಿತ್ತು.
ಈ ಸಮ್ಮೇಳನದಲ್ಲಿ ಇಸುಝು ಇಂಡಿಯಾ ಸೇಲ್ಸ್ ಆಪರೇಶನ್ನ ಉಪಾಧ್ಯಕ್ಷ ತಕೇಶಿ ಹಿರಾನೊ, ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಾವೇರಿ ಇಸುಝು, ಅಮಿತಾಬ್ ಸಿಂಗ್, ಸ್ಟೇಟ್ ಮ್ಯಾನೇಜರ್ ಕರ್ನಾಟಕ ಮತ್ತು ನಾರ್ತ್ ಕೇರಳ, ಬ್ರಾಂಚ್ ಮ್ಯಾನೇಜರ್ ಸಂಪತ್ ಮಾಡ, ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ಸ್ ಸುಜಿತ್ ಕುಮಾರ್, ದೀಕ್ಷಿತ್ ಶೆಟ್ಟಿ ಹಾಗೂ ಡಿ ಮ್ಯಾಕ್ಸ್ ಗ್ರಾಹಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾವೇರಿ ಇಸುಝುವಿನ ಡಿ-ಮ್ಯಾಕ್ಸ್ ಗ್ರಾಹಕರಿಗೆ ವಾಣಿಜ್ಯ ಯುಟಿಲಿಟಿ ವಾಹನಗಳನ್ನು ಹಸ್ತಾಂತರಿಸಲಾಯಿತು.
ಇಸುಝು ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ 2012ರಲ್ಲಿ ಪ್ರವೇಶಿಸಿತು. ಮೊದಲ ಹಂತದಲ್ಲಿ ಕಂಪನಿಯು ಮಾರುಕಟ್ಟೆಯ ಅಧ್ಯಯನದ ಬಳಿಕ ಭಾರತೀಯ ಉಪಖಂಡದಲ್ಲಿ ಸೀಮಿತ ಗಾತ್ರದ ತನ್ನ ಕಾರ್ಯಾಚರಣೆಯನ್ನು 2014-15ರವರೆಗೆ ನಡೆಸಿತು. ಆ ಬಳಿಕ 2016ರಲ್ಲಿ ಆಂಧ್ರಪ್ರದೇಶದ ಶ್ರೀಸಿಟಿಯಲ್ಲಿ ದೇಶಿಯ ತಯಾರಿಕಾ ಘಟಕವನ್ನು ಸ್ಥಾಪಿಸಿತು. ಈ ಉತ್ಪಾದನಾ ಘಟಕವು 107 ಎಕ್ರೆಗಿಂತಲೂ ಅಧಿಕ ವಿಸ್ತೀರ್ಣದಲ್ಲಿ ಹಬ್ಬಿದ್ದು 120,000 ಮಿಕ್ಕಿ ವಾಹನಗಳ ಯುನಿಟ್ಗಳನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ.
2018ರಲ್ಲಿ ಇಸುಝು ಮೋಟಾರ್ಸ್ ಮಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟಿತು ಮತ್ತು ಯಶಸ್ವಿಯಾಗಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ. ಇಸುಝುವಿನ ಸಹಯೋಗದಲ್ಲಿ ಕಾವೇರಿ ಸಮೂಹವು ದಕ್ಷ ಪಿಕ್-ಅಪ್ ಮತ್ತು ಯುಟಿಲಿಟಿ ವಾಹನಗಳ ಅವಶ್ಯಕತೆಗಳನ್ನು ಗುರುತಿಸಿಕೊಂಡು ಇಸುಝು ಡಿ-ಮ್ಯಾಕ್ಸ್ ಮತ್ತು ಎಂಯು-ಎಕ್ಸ್ ವಾಹನಗಳಿಗೆ ಆಶಾದಾಯಕ ಮಾರುಕಟ್ಟೆಯನ್ನು ಕಂಡುಕೊಂಡಿದೆ.
ಇಸುಝು ಬ್ರಾಂಡ್ 1916ರಿಂದಲೂ ವಾಣಿಜ್ಯ ಬಳಕೆಯ ವಾಹನಗಳನ್ನು ತಯಾರಿಸುತ್ತಿದ್ದು, ಈ ಸಭೆಯಲ್ಲಿ ಗ್ರಾಹಕರಿಗೆ ತಾನು ಬೆಳೆದು ಬಂದ ಪಯಣದ ಸವಿಸ್ತಾರವಾದ ಮಾಹಿತಿ ನೀಡಲಾಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಇಸುಝು ಬೆಳೆದು ಬಂದ ಹಾದಿಯನ್ನು ವಿವರಿಸಲಾಯಿತು.
ಡಿ-ಮ್ಯಾಕ್ಸ್ ವಾಣಿಜ್ಯ ಬಳಿಕೆಯ ವಾಹನದ ಕುರಿತಾದ ಮಾಹಿತಿಯನ್ನು ಈ ಸಭೆಯಲ್ಲಿ ನೀಡಲಾಯಿತು. ಅಲ್ಲದೇ ಭಾರತದ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ನೊಂದಿಗೆ ಪೈಪೋಟಿಯ ಕುರಿತು ವಿವರಿಸಲಾಯಿತು. ಮಾರಾಟ ನಂತರ ಸೇವಾ ವೈಖರಿಯ ಬಗ್ಗೆ ಸುದೀರ್ಘ ಚರ್ಚಿಸಲಾಯಿತು. ಸಂತೃಪ್ತ ಗ್ರಾಹಕರು ತಮ್ಮ ಅನಿಸಿಕೆಯನ್ನು ಪರಸ್ಪರ ಹಂಚಿಕೊಂಡರು ಹಾಗೂ ಹೊಸ ಗ್ರಾಹಕರಿಗೆ ಶಿಫಾರಸ್ಸು ಮಾಡಲಾಗಿ ಅವರನ್ನು ಹುರಿದುಂಬಿಸಿದರು.
ಕಾವೇರಿ ಇಸುಝುಯ ಸೀನಿಯರ್ ಜನರಲ್ ಮ್ಯಾನೇಜರ್ ರಾಜೇಶ್ ಶೆಟ್ಟಿ ವಂದಿಸಿದರು.
ಇಸುಝು ಮಾದರಿ ವಾಹನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾವೇರಿ ಇಸುಝು ಶೋರೂಂ, 4th ಮೈಲ್, ರಾ.ಹೆ. 66, ಬಂಗ್ರಕೂಳೂರು, ಮಂಗಳೂರು ಇಲ್ಲಿ ಸಂದರ್ಶಿಸಬಹುದು, ಅಥವಾ 9845061202ಕ್ಕೆ ಕರೆಮಾಡಿ ಅಥವಾ ಜಾಲತಾಣ https://www.isuzu.in ಅನ್ನು ಸಂದರ್ಶಿಸಿ ಮಾಹಿತಿ ಪಡೆಯಬಹುದಾಗಿದೆ.







