ಉಡುಪಿ: ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಉಡುಪಿ, ಜು.26: ಉಡುಪಿ ಜಿಲ್ಲಾ ಮಾಜಿ ಸೈನಿಕರ ವೇದಿಕೆ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ದೇಶದ ರಕ್ಷಣೆಗೆ ಪ್ರಾಣತ್ಯಾಗ ಮಾಡಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಅರ್ಪಣೆ ಹಾಗೂ ಕಾರ್ಗಿಲ್ ವಿಜಯ್ ದಿವಸ್‌ನ್ನು ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದಲ್ಲಿ ಶುಕ್ರವಾರ ಆಚರಿಸ ಲಾಯಿತು.
ಧ್ವಜಾರೋಹಣ ನೆರವೇರಿಸಿದ ಮಾಜಿ ಸೈನಿಕ ವೇದಿಕೆ ಅಧ್ಯಕ್ಷ ಕರ್ನಲ್ ಎ್ಇಎ ರೋಡ್ರಿಗಸ್ ಮಾತನಾಡಿ, ಸೈನಿಕರ ತ್ಯಾಗ, ಬಲಿದಾನ, ಸೇವಾ ಮನೋಭಾವನೆಯಿಂದಾಗಿ ದೇಶ ಸ್ವತಂತ್ರವಾಗಿ ಅಭಿವೃದ್ಧಿಯತ್ತ ದಾಪುಗಾಲಿ ಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯೋಧನಿಗೂ ಗೌರವ ಸಲ್ಲಿಸಬೇಕು. ಯೋಧರ ತ್ಯಾಗಕ್ಕೆ ಗೌರವ ಸಲ್ಲಿಸಬೇಕೇ ಹೊರತು ಅಸಡ್ಡೆ, ತಪ್ಪು ಕಲ್ಪನೆ ಇಟು್ಟಕೊಳ್ಳಬಾರದು ಎಂದು ಹೇಳಿದರು.
ಸೈನ್ಯದಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಸಾಹಸ ಮೆರೆದು ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ನಿವೃತ್ತ ಯೋಧ ಜಗದೀಶ್ ಪ್ರಭು ಹಿರಿಯಡ್ಕ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪನ್ಯಾಸಕ ಗಣೇಶ್ ಪ್ರಸಾದ್ ಮಾತನಾಡಿದರು.
ಮಾಜಿ ಸೈನಿಕರ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ್, ವೇದಿಕೆ ನಿರ್ದೇಶಕ ಮೋಹನ್ ಕುಮಾರ್, ನಾಯಬ್ ಸುಭೇದರ್ ಎಸ್.ಕೆ.ಮಲ್ಯ, ಸುಭೇದರ್ ರಾದ ಈಶ್ವರ ಎಂ.ಕೆ., ಉದಯ ಪೂಜಾರಿ, ಗಣಪತಿ ಶೇರಿಗಾರ್, ನಾಯರ್ ಕೃಷ್ಣ ಆಚಾರ್ಯ, ಬಿ.ಕೆ.ಸಾಲಿಯಾನ್, ಸಾಧು ಕುಂದರ್, ಉದಯ ಪೂಜಾರಿ, ಗಣೇಶ್ ರಾವ್, ರಘುಪತಿ ರಾವ್, ವಿಶ್ವನಾಥ ಉಪಸ್ಥಿತರಿದ್ದರು.







