ಉಡುಪಿ; ಎಸ್‌ಡಿಎಂ ಕಾಲೇಜಿನಲ್ಲಿ ವನಮಹೋತ್ಸವ ಸಪ್ತಾಹ ಆಚರಣೆ

ಉಡುಪಿ, ಜು.26: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದಲ್ಲಿ ದ್ರವ್ಯಗುಣ ವಿಜ್ಞಾನ ವಿಭಾಗ, ಮೂಲಿಕೋ ದ್ಯಾನ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗ ದಲ್ಲಿ ವನಮಹೋತ್ಸವ ಸಪ್ತಾಹವನ್ನು ಇತ್ತೀಚೆಗೆ ಆಚರಿಸಲಾಯಿತು.
ಜು.10ರಂದು ಪಿಲಿಕುಳ ನಿಸರ್ಗಧಾಮದ ಉದ್ಯಾನದ ಮೇಲ್ವಿಚಾರಕ ಉದಯ್‌ಕುಮಾರ್ ಶೆಟ್ಟಿ ಅತಿಥಿ ಉಪನ್ಯಾಸ ನೀಡಿದರು. ಎಸ್‌ಡಿಎಂ ಆಯು ರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ವಿದ್ಯಾಲಕ್ಷ್ಮಿ ಕೆ. ಸ್ವಾಗತಿಸಿದರು. ಡಾ.ಸುಮಾ ಮಲ್ಯ ವರದಿ ವಾಚಿಸಿದರು. ಡಾ.ಮೊಹಮ್ಮದ್ ಫೈಸಲ್ ವಂದಿಸಿದರು. ವಿದ್ಯಾರ್ಥಿ ಡಾ. ಲೇಖನ್ ಕಾರ್ಯಕ್ರಮ ನಿರೂಪಿಸಿದರು.
ಈ ಪ್ರಯುಕ್ತ ಪ್ರತಿದಿನ ಸುಮಾರು 300ಕ್ಕೂ ಅಧಿಕ ಅಪರೂಪದ ಹಾಗೂ ಪಂಚಕರ್ಮ ಉಪಯೋಗಿ ಔಷಧೀಯ ಸಸ್ಯಗಳನ್ನು ನೆಡಲಾಯಿತು. ದ್ರವ್ಯಗುಣ ವಿಭಾಗ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ., ಮೂಲಿಕೋದ್ಯಾನ ಘಟಕದ ಮುಖ್ಯಸ್ಥೆ ಡಾ. ಸುಮಾ ಮಲ್ಯ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ವಿದ್ಯಾಲಕ್ಷ್ಮಿ ಕೆ., ದ್ರವ್ಯಗುಣ ವಿಭಾಗದ ಉಪನ್ಯಾಸಕರಾದ ಡಾ. ಮೊಹಮ್ಮದ್ ಫೈಸಲ್, ಡಾ.ನಿವೇದಿತಾ ಶೆಟ್ಟಿ, ಡಾ.ತೇಜಸ್ವಿ ನಾಯ್ಕಿ, ರಾಷ್ಟ್ರೀಯ ಸೇವಾ ಸಹಯೋಜನಾಧಿಕಾರಿಗಳಾದ ಡಾ.ಅನಿರುದ್ಧ್, ಡಾ. ಶರಶ್ಚಂದ್ರ ಆರ್., ಡಾ.ಶ್ರೀನಿಧಿ ಧನ್ಯ, ಡಾ.ಸರಿತಾ ಟಿ. ಸಹಕರಿಸಿದರು.







