ಐಎಂಎ ವಂಚನೆ ಪ್ರಕರಣ: ಜಿಲ್ಲಾಧಿಕಾರಿ ವಿಜಯಶಂಕರ್ ಸೇರಿ ಮೂವರಿಗೆ ಜಾಮೀನು

ವಿಜಯಶಂಕರ್
ಬೆಂಗಳೂರು, ಜು.26: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬೆಂಗಳೂರು ನಗರದ ಅಮಾನತುಗೊಡಿರುವ ಜಿಲ್ಲಾಧಿಕಾರಿ ವಿಜಯಶಂಕರ್ ಒಳಗೊಂಡಂತೆ ಮೂವರಿಗೆ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ವಿಜಯ್ ಶಂಕರ್ ಡಿಸಿ ಆಗಿದ್ದ ವೇಳೆ ಐಎಂಎ ಕಂಪೆನಿ ಮಾಲಕ ಮನ್ಸೂರ್ ಖಾನ್ನಿಂದ ಲಂಚ ಪಡೆದು ಐಎಂಎ ಸಂಸ್ಥೆ ಬಗ್ಗೆ ಸರಕಾರಕ್ಕೆ ಸುಳ್ಳು ವರದಿ ನೀಡಲು ಸಹಿ ಹಾಕಿದ್ದರು. ಹೀಗಾಗಿ, ವಿಜಯ್ಶಂಕರ್ ಅವರನ್ನ ಎಸ್ಐಟಿ ಅಧಿಕಾರಿಗಳು ಲಂಚ ಪಡೆದ ಆರೋಪದ ಮೇಲೆ ಬಂಧಿಸಿದ್ದರು. ಶುಕ್ರವಾರ ಡಿಸಿ ವಿಜಯಶಂಕರ್ ಸೇರಿ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
Next Story





