ಪಿಪಿಸಿ: ಆ.11ಕ್ಕೆ ವಿಜ್ಞಾನ ಅಣಕು ಪರೀಕ್ಷೆ
ಉಡುಪಿ, ಜು. 26: ವಿಜ್ಞಾನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಡೆಸಲಾಗುವ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನೆಯ ಅಣಕು ಪರೀಕ್ಷೆಯು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆ.11ರಂದು ನಡೆಯಲಿದೆ.
ಅರ್ಜಿಗಳನ್ನು ಸಲ್ಲಿಸಲು ಆ.5 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿ ಗಾಗಿ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ, ಉಪನ್ಯಾಸಕ ಸುದರ್ಶನ ಶೆಟ್ಟಿ ಅಥವಾ ಧನರಾಜ್ ಇವರನ್ನು ಸಂಪರ್ಕಿಸಬಹುದು. ramanujanppc. blogspot.com ಬ್ಲಾಗಿನಲ್ಲಿ ವಿವರ ಪ್ರಕಟಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Next Story





