ಕಡಿಯಾಳಿ: ಜು.28ರಂದು ಕೆಸರ್ದ ಗೊಬ್ಬು
ಉಡುಪಿ, ಜು.26: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ತನ್ನ 53ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಮುಂಚಿತವಾಗಿ ವರ್ಷಂಪ್ರತಿ ಆಚರಿಸುವ ಕೆಸರ್ದಗೊಬ್ಬು ಕಾರ್ಯಕ್ರಮ ಜು.28ರ ರವಿವಾರ ಬೆಳಗ್ಗೆ 9:30ಕ್ಕೆ ಕಡಿಯಾಳಿ ದೇವಸ್ಥಾನದ ವಠಾರದಲ್ಲಿ (ಕಮಲ ಹೋಟೆಲ್ ಹಿಂದುಗಡೆ) ನಡೆಯಲಿದೆ.
ಕಾರ್ಯಕ್ರಮವನ್ನು ಕಡಿಯಾಳಿಯ ಉದ್ಯಮಿ ಭೀಮ್ ಸಿಂಗ್ ಉದ್ಘಾಟಿಸಲಿದ್ದು, ಸಮಿತಿಯ ಅಧ್ಯಕ್ಷರಾದ ಪ.ವಸಂತ ಭಟ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಶಶಿಕಿರಣ್ ಉಮಾಕಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೆಸರುಗದ್ದೆ ಕೂಟದ ಉಸ್ತುವಾರಿ ಗಣೇಶ್ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





