ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
ಮಣಿಪಾಲ, ಜು.26: ವೈಯಕ್ತಿಕ ಕಾರಣದಿಂದ ಮನನೊಂದ 80 ಬಡಗು ಬೆಟ್ಟು ಗ್ರಾಮದ ದಶರಥನಗರದಲ್ಲಿರುವ ಆಪಾರ್ಟ್ ಮೆಂಟ್ ನಿವಾಸಿ ನವೀನ್ ಭಕ್ತ(32) ಎಂಬವರು ತನ್ನ ಫ್ಲಾಟ್‌ನ ಮಲಗುವ ಕೋಣೆಯಲ್ಲಿ ಜು.24ರಂದು ರಾತ್ರಿ ವೇಳೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕಾಯಿಲೆಯಿಂದ ಬಳಲುತ್ತಿದ್ದ ಕೆದೂರು ಗ್ರಾಮದ ಬಗ್ವಾಡಿಯ ನಾರಾಯಣ ಶೆಟ್ಟಿ ಎಂಬವರ ಮಗ ಜೀವನ್ ಶೆಟ್ಟಿ(52) ಎಂಬ ವರು ಜು.25ರಂದು ಬೆಳಗಿನ ಜಾವ ತನ್ನ ಹೆಂಡತಿಯ ಮನೆ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ: ಅನಾರೋಗ್ಯದಿಂದ ಬಳಲುತ್ತಿದ್ದ ಪೆರ್ಡೂರು ಗ್ರಾಮದ ಪಾಡಿಗಾರ ನಿವಾಸಿ ಬೋಜು ಪುತ್ರನ್(55) ಎಂಬವರು ಮಾನಸಿಕವಾಗಿ ನೊಂದು ಜು.25ರಂದು ರಾತ್ರಿ ವೇಳೆ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





