ಬೈಂದೂರು: ಬಾವಿಗೆ ಬಿದ್ದು ಮೃತ್ಯು
ಬೈಂದೂರು, ಜು.26: ಬಾವಿಗೆ ನೀರು ಸೇದಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜು.25ರಂದು ಸಂಜೆ ಶಿರೂರು ಕೆಳಪೇಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಶಿರೂರು ಕೇಳಪೇಟೆಯ ಚಂದ್ರಹಾಸ್ ಶ್ಯಾನುಭೋಗ (74) ಎಂದು ಗುರುತಿಸಲಾಗಿದೆ. ರವಿಕಾಂತ್ ಶ್ಯಾನುಭಾಗ್ ಎಂಬವರ ಅಂಗಡಿ ಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಅಲ್ಲೇ ಸಮೀಪದ ಬಾವಿಗೆ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





