ಜು. 27: ಎಸ್ ಐ ಒ ದಿಂದ 'ಗ್ರೀನ್ ಫೂಟ್ ಪ್ರಿಂಟ್ಸ್' ಪರಿಸರ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಒ) ಮಂಗಳೂರು ಶಾಖೆಯ ವತಿಯಿಂದ 'ಗ್ರೀನ್ ಫೂಟ್ ಪ್ರಿಂಟ್ಸ್(ಸ್ಟಾರ್ಟ್ ಮೇಕ್ ಎ ಡಿಫರೆನ್ಸ್) ಎಂಬ ಧ್ಯೇಯವಾಕ್ಯದೊಂದಿಗೆ ಪರಿಸರ ಸಂರಕ್ಷಣಾ ಅಭಿಯಾನಕ್ಕೆ ಜು.27 ರಂದು ಚಾಲನೆ ನೀಡಲಿದೆ.
ನಗರದ ಬಂದರ್ ನಲ್ಲಿರುವ ಹಿದಾಯತ್ ಸೆಂಟರ್ ನ ಸಭಾಂಗಣದಲ್ಲಿ ಸಂಜೆ 5.30 ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್ ನ ರಾಜ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್, ಎಸ್ ಐ ಒ ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ, ಮಂಗಳೂರು ನಗರಾಧ್ಯಕ್ಷ ಇರ್ಷಾದ್ ವೇಣೂರು ಸೇರಿದಂತೆ ಮತ್ತಿತತರರು ಭಾಗವಹಿಸಲಿದ್ದಾರೆ ಎಂದು ಎಸ್.ಐ.ಒ ಪರಿಸರ ಸಂರಕ್ಷಣಾ ಅಭಿಯಾನದ ಸಂಚಾಲಕ ಅಮ್ಮಾರ್ ಅಹ್ಸನ್ ತಿಳಿಸಿದ್ದಾರೆ.
ಮಾಧ್ಯಮ ಕಾರ್ಯದರ್ಶಿ,
ಎಸ್ ಐ ಓ, ಮಂಗಳೂರು
Next Story





