ಇಂಡಿಯನ್ ಡಿಸೈನ್ ಸ್ಕೂಲ್: ಮಹಿಳೆಯರಿಗಾಗಿ 'ನಿಮ್ಮ ಹಕ್ಕುಗಳನ್ನು ತಿಳಿಯಿರಿ' ಕಾರ್ಯಕ್ರಮ

ಮಂಗಳೂರು, ಜು. 26: ಮಹಿಳೆಯರ ಹಕ್ಕುಗಳು ಮತ್ತು ಸುರಕ್ಷತೆಗೆ ಸಂಬಂಧಿಸಿದ 'ಅಬ್ ಸಮ್ಜೋತಾ ನಹೀ' ಎಂಬ ಜೋಶ್ ಟಾಕ್ ಕಾರ್ಯಕ್ರಮ ಮತ್ತು ಕಾರ್ಯಾಗಾರವನ್ನು ಇಂಡಿಯನ್ ಡಿಸೈನ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು.
ಐಡಿಎಸ್ ಆವರಣದಲ್ಲಿರುವ ಉಪನ್ಯಾಸ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಐಡಿಎಸ್, ಯೆನೆಪೋಯಾ ಕಾಲೇಜು, ಹೀರಾ ಕಾಲೇಜು, ಅಲ್-ಕಲಮ್ ಅಕಾಡೆಮಿ, ರೋಶನಿ ನಿಲಯ ಕಾಲೇಜು ಮತ್ತು ಶ್ರೀದೇವಿ ಕಾಲೇಜಿನ ಒಟ್ಟು 200 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಹರ್ಯಾಣದ ಗುಡ್ಗಾಂವ್‌ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಜೋಶ್ ಟಾಕ್ಸ್ ಒಂಬತ್ತು ಭಾಷೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸುತ್ತದೆ. ಈ ಕಾರ್ಯಾಗಾರದ ಮುಖ್ಯ ವಿಷಯಗಳು: ಹಕ್ಕುಗಳ ಬಗ್ಗೆ ತಿಳಿಯುವ ಅಗತ್ಯ ಮತ್ತು ಮೂಲಭೂತ ಹಕ್ಕುಗಳ ಪರಿಚಯ ಹಾಗೂ ಲಿಂಗ ಸಮಾನತೆಯ ಪರಿಕಲ್ಪನೆ. ಉದ್ಯೋಗ ಮತ್ತು ಮನೆಯಲ್ಲಿ ಸಮಾನತೆ. ಕಾನೂನು ಹಕ್ಕುಗಳು ಮತ್ತು ಲೈಂಗಿಕ ದೌರ್ಜನ್ಯ, ಪೋಕ್ಸೊ, ಕೌಟುಂಬಿಕ ಹಿಂಸಾಚಾರ, ವಿಚ್ಛೇದನ, ಜೀವನಾಂಶ ಮತ್ತು ಅನುವಂಶಿಕತೆಯ ರೂಪುರೇಶೆಗಳಾಗಿವೆ.
ಸೈಬರ್ ಸುರಕ್ಷತೆ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು. ಪೊಲೀಸರಿಗೆ ಸಂಬಂಧಪಟ್ಟಂತೆ ಹಕ್ಕುಗಳ ತಿಳುವಳಿಕೆ ಮತ್ತು ಕಾನೂನು ಪ್ರಕಾರ ಸಮ್ಮತಿಯ ವ್ಯಾಖ್ಯಾನವಾಗಿದೆ. ಇಂಡಿಯನ್ ಡಿಸೈನ್ ಸ್ಕೂಲ್ ನಿರ್ದೇಶಕಿ ಡಾ. ನಫೀಸಾ ಶಿರಿನ್ ಹಾಗೂ ಪ್ರಾಂಶುಪಾಲ ರಾಮನಾಥ್ ನಾಯಕ್ ಅವರು ರಿಚಾ ಚಡ್ಡಾ ಅವರಿಗೆ ಶ್ಲಾಘನೆ ಪ್ರಮಾಣ ಪತ್ರ ನೀಡುವ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.













