ಟಯರ್ ಸ್ಫೋಟಗೊಂಡು ಕೆರೆಗೆ ಉರುಳಿದ ಕಾರು: ಮಹಿಳೆ ಮೃತ್ಯು
ಬೆಂಗಳೂರು, ಜು.26: ವೇಗವಾಗಿ ಹೋಗುತ್ತಿದ್ದ ಕಾರಿನ ಚಕ್ರ ಸ್ಫೋಟಗೊಂಡು ಕೆರೆಗೆ ಉರುಳಿ ಮಹಿಳೆಯೊಬ್ಬರು ಮೃತಪಟ್ಟು, ಅವರ ಪತಿ ಗಾಯಗೊಂಡಿರುವ ದುರ್ಘಟನೆ ನಗರದ ಹೊರವಲಯದ ಜಿಗಣಿ ಬಳಿ ನಡೆದಿದೆ.
ಹುಲಿಮಂಗಲದ ಮಮತಾ (35) ಮೃತಪಟ್ಟಿದ್ದು, ಅವರ ಪತಿ ಆನಂದ್ ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಲಿಮಂಗಲದಿಂದ ಜಿಗಣಿ ಕಡೆಗೆ ಆನಂದ್, ಮಮತಾ ದಂಪತಿ ಕಾರಿನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಜಿಗಣೆ ಕೆರೆ ಬಳಿ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡು ಕೆರೆಗೆ ಉರುಳಿಬಿದ್ದಿದೆ ಚಾಲಕನ ಸೀಟಿನ ಪಕ್ಕ ಕುಳಿತಿದ್ದ ಮಮತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಪತಿ ಆನಂದ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಗಣಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story