ಬನ್ನಂಜೆ ಗೋವಿಂದಾಚಾರ್ಯರಿಗೆ ‘ಪಾಂಡಿತಾಚಾರ್ಯ ಪ್ರಶಸ್ತಿ’ ಪ್ರದಾನ

ಉಡುಪಿ, ಜು.27: ಸಗ್ರಿ ಶ್ರೀವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.24 ರಂದು ಜರುಗಿದ ಭಾಗವತ ಸಪ್ತಾಹದ ಮಂಗಲೋತ್ಸವ ಸಮಾರಂಭದಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಪಾಂಡಿತಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಬಳಿಕ ಪೇಜಾವರ ಸ್ವಾಮೀಜಿ ಮಾತನಾಡಿ, ಗೋವಿಂದಾಚಾರ್ಯರು ಸಂಶೋಧನೆ, ಲೇಖನ, ಪ್ರವಚನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ರಾಷ್ಟ್ರ ಮಟ್ಟದ ಗೌರವಗಳನ್ನು ಪಡೆದುಕೊಂಡಿದ್ದಾರೆ. ನಾಡಿನ ಎಲ್ಲೆಡೆ ಸುತ್ತಾಡಿ ಮಾರ್ಗದರ್ಶನ ನೀಡಿರುವ ಇವರಿಂದ ಹಲವಾರು ದೇವಸ್ಥಾನಗಳ ಜೀರ್ಣೋ ದ್ದಾರಗೊಂಡಿವೆ. ಧರ್ಮಶಾಸ್ತ್ರದ ಎಲ್ಲವನ್ನು ಅರಿತ ಪಂಡಿತ ಇವರು ಎಂದು ಹೇಳಿದರು.
ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಹೆರ್ಗ ಗೋಪಾಲ ಕೃಷ್ಣ ಸಾಮಗ, ಪ್ರದೀಪ ಕಲ್ಕೂರ, ಅನಂತ ಸಾಮಗ, ಸಗ್ರಿ ಗೋಪಾಲಕೃಷ್ಣ ಉಪಾಧ್ಯ, ಏಕವಾಡಿ ಅರವಿಂದ ಸೇವಾದಾರರಾದ ಸಗ್ರಿ ಗೋಪಾಲಕೃಷ್ಣ ಸಾಮಗ ಮತ್ತು ಲತಾ ಜಿ.ಸಾಮಗ ಮೊದಲಾದವರು ಉಪಸ್ಥಿತರಿದ್ದರು.
Next Story





