ಉಡುಪಿಯಲ್ಲಿ ಆದಾಯ ತೆರಿಗೆ ದಿನಾಚರಣೆ

ಉಡುಪಿ, ಜು.27: ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ಇದರ ವತಿಯಿಂದ 159ನೆ ಆದಾಯ ತೆರಿಗೆ ದಿನವನ್ನು ಜು.24ರಂದು ಇದರ ಆದಿಉಡುಪಿ ಶಾಖಾ ಕಚೇರಿಯಲ್ಲಿ ಆಚರಿಸಲಾಯಿತು.
ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತೆರಿಗೆ ಇಲಾಖೆಯ ಉಪ ಆಯುಕ್ತ ಶ್ರೀನಿವಾಸ ಮಾತನಾಡಿ, ಪ್ರತಿಯೊಬ್ಬರು ಗಳಿಸಿದ ಆದಾಯದಲ್ಲಿ ಆದಾಯ ತೆರಿಗೆ ಪಾವತಿಸುವುದರೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಬೇಕು. ದೇಶದ ಅಭಿವೃದ್ಧಿ ತೆರಿಗೆ ಹಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಅಧಿಕಾರಿಗಳಾದ ಕೃಷ್ಣಮೂರ್ತಿ, ಶಶಾಂಕ ಬಾಳಿಗಾ, ರವೀಶ್, ನಿವೃತ ಅಧಿಕಾರಿಗಳಾದ ತಾರಾನಾಥ್, ಸುಭಾಷ್ ಕೆ., ಎಂ.ಎಸ್.ಪೂಜಾರಿ ಉಪಸ್ಥಿತ ರಿದ್ದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿಗಳನ್ನು ಗೌರವಿಸಲಾ ಯಿತು ಬಳಿಕ ಎಲ್ಲ ಸೇರಿ ಪರಿಸರವನ್ನು ಸ್ವಚ್ಛ ಗೊಳಿಸಿದರು. ಸ್ಪಂದನಾ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಸಿಹಿ ತಿಂಡಿ ಮತ್ತು ಅಗತ್ಯ ವಸ್ತುಗಳನ್ನು ವಿತರಿಸ ಲಾಯಿತು.
Next Story





