ವಕೀಲರ ಸಂಘದ ಚುನಾವಣೆ: ನೂತನ ಅಧ್ಯಕ್ಷರಾಗಿ ನರಸಿಂಹ ಹೆಗ್ಡೆ ಆಯ್ಕೆ

ಮಂಗಳೂರು, ಜು.27: ವಕೀಲರ ಸಂಘದ ಚುನಾವಣೆಯು ಶುಕ್ರವಾರ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಎನ್. ನರಸಿಂಹ ಹೆಗ್ಡೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಜಿನೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.
ವಕೀಲರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 1,032 ಮತಗಳಿದ್ದು, ಈ ಪೈಕಿ 963 ಮತಗಳು ಚಲಾವಣೆಯಾಗಿವೆ. 15 ಮಂದಿ ಕಾರ್ಯಕಾರಿ ಸಮಿತಿಯ ಹೊಸ ತಂಡ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ವಕೀಲರ ಸಂಘದ ಕಾರ್ಯದರ್ಶಿಯಾಗಿ ಎಚ್.ವಿ. ರಾಘವೇಂದ್ರ, ಜೊತೆ ಕಾರ್ಯದರ್ಶಿಯಾಗಿ ಶರ್ಮಿಳಾ, ಖಜಾಂಚಿಯಾಗಿ ಅರುಣಾ ಆಯ್ಕೆಯಾದರು. 15 ಮಂದಿಯ ಕಾರ್ಯಕಾರಿ ಸಮಿತಿಗೆ ನೂತನ ತಂಡ ರಚನೆಯಾಯಿತು. ಚುನಾವಣಾಧಿಕಾರಿಯಾಗಿ ಹಿರಿಯ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ಕಾರ್ಯನಿರ್ವಹಿಸಿದರು. ಮತ ಎಣಿಕೆ ಕಾರ್ಯ ಶನಿವಾರ ಮಧ್ಯರಾತ್ರಿವರೆಗೆ ಪೊಲೀಸ್ ಭದ್ರತೆಯಲ್ಲಿ ನಡೆಯಿತು.
Next Story





