ಎಕ್ಸಲೆಂಟ್: ಕಾರ್ಗಿಲ್ ವಿಜಯದಿವಸ ಆಚರಣೆ

ಮೂಡುಬಿದಿರೆ: ದೇಶರಕ್ಷಣೆ ಕೇವಲ ಸೈನಿಕರ ಜವಾಬ್ದಾರಿಯಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯ. ದೇಶ ಸೇವೆ ಸಲ್ಲಿಸಲು ಯೋಧನೇ ಆಗಬೇಕೆಂದಿಲ್ಲ, ಭಗತ್‍ಸಿಂಗ್‍ನ ದೇಶಾಭಿಮಾನ, ಭೋಸರ ನಾಯಕತ್ವ ಗುಣ ನಮ್ಮಲ್ಲ್ಲಿಮೂಡಿದಾಗ ರಾಷ್ಟ್ರಸೇವೆಯ ಕಾಯಕಕ್ಕೆ ನಮ್ಮ ಮನಸ್ಸು ಸದಾ ಸಿದ್ಧವಾಗಿರುತ್ತದೆಯೆಂದು ಖ್ಯಾತ ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ ಇವರು ಅಭಿಪ್ರಾಯಪಟ್ಟರು.
ಇಲ್ಲಿನ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ‘ಕಾರ್ಗಿಲ್ ವಿಜಯ ದಿವಸ’ ಪ್ರಯುಕ್ತ ಆಯೋಜಿಸಿದ್ದ “ಯೋಧರೇ ನಿಮಗಿದೋ ನಮನ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯು ರಾಷ್ಟ್ರಾಭಿಮಾನ, ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಆಯೋಜಿಸುತ್ತಿರುವ ಕಾರ್ಯಕ್ರಮಗಳು ನಿಜವಾಗಿಯೂ ಸ್ತುತ್ಯಾರ್ಹವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ವಿದ್ಯಾರ್ಥಿಗಳೊಂದಿಗೆ ತಮ್ಮ ಸೈನಿಕ ಜೀವನದ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ನಿವೃತ್ತಯೋಧ ಚಂದಪ್ಪ ಡಿ. ಎಸ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.







