Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕಾಡುವಾಸಿ ಕೃಷಿಕರ ಸುಸ್ಥಿರ ಬದುಕು

ಕಾಡುವಾಸಿ ಕೃಷಿಕರ ಸುಸ್ಥಿರ ಬದುಕು

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ28 July 2019 12:17 AM IST
share
ಕಾಡುವಾಸಿ ಕೃಷಿಕರ ಸುಸ್ಥಿರ ಬದುಕು

ಗ್ರಾಮದಾಚೆ ನಿಂತ ನಾಗರಿಕ ಭಾರತೀಯರಿಗೆ ಎಲ್ಲಾ ಹಳ್ಳಿಗಳು ಹೆಚ್ಚು ಸುರಕ್ಷಿತವೆಂದೇ ಕಾಣಿಸುತ್ತದೆ. ಹಳ್ಳಿಯ ನೀರು, ತರಕಾರಿ, ಅಕ್ಕಿ, ಹಾಲು, ಎಲ್ಲವೂ ನಂಬಿಕೆಗೆ ಯೋಗ್ಯ; ಗ್ರಾಮ ಗಳಿಂದ ಎದ್ದು ಬರುವ ಇವೆಲ್ಲಾ ಸದೃಢ- ಸುಸ್ಥಿರ ಎಂಬ ನಂಬಿಕೆಗಳಿವೆ. ದಿನೇ ದಿನೇ ಆ ನಂಬಿಕೆ ಕರಗುತ್ತಾ ಹಳ್ಳಿಯೂ ಮಾರುಕಟ್ಟೆಯೊಂದಿಗೆ ಬೆಸೆಯುತ್ತಿರುವುದು ವಸ್ತು ಸ್ಥಿತಿ.

ಈ ಭೂಮಿಯನ್ನು ಅಗೆದು ಉಗೆದು ಬಡಿದು ಬಗ್ಗಿಸಿ ಲಾಲಿಸಿ ಬಾಳಿಸಿ ಹದಗೊಳಿಸಿ ಆ ಪಾಯದ ಮೇಲೆ ಸುಸ್ಥಿರ ಬದುಕು ಕಟ್ಟುವ ಕ್ರಿಯೆ ಆರಂಭವಾದುದೇ ಕೃಷಿಯಲ್ಲಿ. ಈ ಕಾರಣಕ್ಕಾಗಿಯೇ ಮೇಟಿಗೆ ಕನ್ನಡದಲ್ಲಿ ‘ಆರಂಭ’ ಎಂಬ ಹೆಸರಿದೆ. ಭೂಮಿಮೇಲೆ ಹೀಗೆ ಗೆರೆ ಎಳೆದು ಬೀಜ ಇರಿಸಿ ಫಲ ಬರಿಸಿ ಅನ್ನ ಗಿಟ್ಟಿಸಿದ ಅನ್ವೇಷಣೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನೆಲಮುಖಿ ಮನಸ್ಸಿನ ಈ ಚಲನೆ ಕಾಡು, ಗ್ರಾಮ, ಊರು, ನಾಡು ನಗರ ದಾಟಿ ಈಗ ಮಹಾನಗರದ ಆಚೆ ನಿಂತಿದೆ. ಆರಂಭದಲ್ಲಿ ಮೃದುವಾಗಿ ಮೆದುವಾಗಿ ಸಾಗಿ ಆನಂತರ ವೇಗ ವೃದ್ಧಿಸಿ ನಾಗಾಲೋಟಕ್ಕೆ ಚಿಗಿದು ಈಗಂತೂ ಮನುಷ್ಯ ಭೂಮಿ ಆಚೆ ಬದುಕುವ, ಮಂಗಳನ ಅಂಗಳದಲ್ಲಿ ಮನೆ ಮಾಡುವ ಸನಿಹದಲ್ಲಿದ್ದಾನೆ!

ಕೃಷಿಯ ಬಣ್ಣ ಹಸಿರು. ಈ ಕಾರಣಕ್ಕಾಗಿಯೇ ಗ್ರಾಮದಾಚೆ ನಿಂತವರಿಗೆಲ್ಲಾ ಹಳ್ಳಿಗಳು ಹೆಚ್ಚು ಸುರಕ್ಷಿತವೆಂದು ಕಾಣಿಸುತ್ತಿದೆ. ಹಳ್ಳಿಯ ನೀರು, ಗಾಳಿ, ಅನ್ನ, ಮಣ್ಣು ಎಲ್ಲವೂ ನಂಬಿಕೆಗೆ ಯೋಗ್ಯ; ಗ್ರಾಮಗಳಿಂದ ನಗರ, ಮಹಾನಗರಗಳಿಗೆ ಎದ್ದೆದ್ದು ಬರುವ ಹಾಲು, ತರಕಾರಿ, ಅನ್ನ ಸದೃಢ ಎಂಬೆಲ್ಲಾ ನಂಬಿಕೆಗಳಿವೆ. ಹಸಿರಿಗೆ ನಕಲಿ ಶಕ್ತಿ ಕಡಿಮೆ. ಎಲ್ಲವನ್ನು ಮುಚ್ಚುವ ಶಕ್ತಿ ಬಚ್ಚಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ.

ನನಗೆ ಕುವೆಂಪು ಕೃತಿಗಳಲ್ಲಿ ಮುಚ್ಚಿಕೊಂಡೇ ಮಾತನಾಡುವ ಕಾಡು ತುಂಬಾ ಇಷ್ಟ. ಶಿವರಾಮ ಕಾರಂತರಂತೆ ಕುವೆಂಪು ಎಂದೂ ಕಾಡನ್ನು ಬಾಗಿಲೊಳಗೆ ಪ್ರವೇಶಿಸಿ ಶೋಧಿಸುವುದಿಲ್ಲ. ಕುವೆಂಪು ‘ಕಾನೂನು ಹೆಗ್ಗಡತಿ’ಗೆ ಬರೆದ ಆರಿಕೆ- ಮುನ್ನುಡಿ ಕನ್ನಡ ಸಾಹಿತ್ಯದಲ್ಲೇ ಅಪರೂಪವಾದುದ್ದು. ಆ ಬೃಹತ್ ಕಾದಂಬರಿಯನ್ನು ಬಿಡಿಸಿ ಜಾರುವ ಮುನ್ನ ಹೀಗೆಯೇ ಬರಬೇಕು, ಕೃತಿಯೊಳಗೆ ಪ್ರವೇಶಿಸಬೇಕೆಂದು ಕುವೆಂಪು ನಿರ್ದೇಶಿಸುತ್ತಾರೆ. ಓದುಗ ಮಹಾಶಯನೆ, ಈ ಕೃತಿಯೊಳಗಡೆ ಪ್ರವೇಶಿಸುವುದೆಂದರೆ ಮೋಟಾರು ವಾಹನದೊಳಗೆ ಕೂತು ನಗರವನ್ನು ನೋಡುವಂತೆ ಅಲ್ಲ....ಎನ್ನುತ್ತಾರೆ! ಇಲ್ಲಿ ಕೃತಿ ಎಂದರೆ ಕಾಡು, ಬೃಹತ್ ಕಾಡು. ಸವಾಲು, ಅನೀರಿಕ್ಷಿತ, ನಿಗೂಢ, ವಿಸ್ಮಯಗಳ ನೆಲೆ.

ಎಲ್ಲವನ್ನು ಮುಚ್ಚಿಟ್ಟೇ ತೆರೆದುಕೊಳ್ಳುವುದು ಕಾಡು-ಹಸಿರಿನ ಬಹುದೊಡ್ಡ ಶಕ್ತಿ. ಕಾಡನ್ನು, ಹಸಿರನ್ನು ಮುಚ್ಚಿ ಆರಾಧಿಸುವ ದಾರಿ ಯಲ್ಲಿ ನಾವು ಕಳೆದುಹೋಗುತ್ತೇವೆ. ಕಾಡಿನ ಏಕಾಂತ, ಅಲ್ಲಿಯ ಸಂಗತ- ಧ್ಯಾನ ಅಂಥದ್ದು. ಹೊರಗಡೆಯ ಬಯಲು ಹಾಗಲ್ಲಾ. ಎಲ್ಲವೂ ಕಾಣಿಸುತ್ತದೆ. ಕಾಣಿಸುವ ಸ್ಥಿತಿ ಹೆಚ್ಚು ಕಲಿಸುವುದಿಲ್ಲ. ತಿದ್ದಿ ಬಡಿದು ಬದಲಾಯಿಸುವುದಿಲ್ಲ. ಕತ್ತಲೆಗೆ ಕಾಳ ರಾತ್ರಿಗೆ ಭಯ, ತಲ್ಲಣ, ಪ್ರಶ್ನೆ ಮತ್ತು ಇವುಗಳಿಗೆ ಸಿಗುವ ಉತ್ತರಗಳು ಹೆಚ್ಚು.

ಕೃಷಿಯ ಹಳೆಯ ಕಾಲಕ್ಕೆ ಅಥವಾ ಹಳೆಯ ಕೃಷಿಗೆ ಹೋದರೆ ಕಾಡು ಸಾಗುವಳಿಯ ಸ್ಥಾಯಿ, ಬಹುಶಃ ಕೃಷಿಕರು ಬೇರಿಗಿಳಿದು ಮಾತನಾಡುತ್ತಾರೆ ಎಂದರೆ ಇದೇ ಇರಬೇಕು. ಅದು ಬರೀ ಅವರೇ ನೆಟ್ಟ ಗಿಡ, ಬಳ್ಳಿಯ ಬೇರಲ್ಲ. ತಾನು ಬದುಕಿ ಬಾಳಿದ ಪರಂಪರೆಯ ಬೇರು. ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಜೀವನ. ಆ ವಿನ್ಯಾಸದೊಳಗೆ ಪುಗುವೆಂದರೆ ಮತ್ತೆ ನಿಬಿಡ ಮುಚ್ಚಿಟ್ಟ ಕಾಡೊಳಗಡೆ ಪ್ರವೇಶಿಸುವುದೆಂದೇ ಅರ್ಥ.

ಉದ್ಯಮ, ಕಾರ್ಖಾನೆಗಳೆಲ್ಲ ಹಣ ಸುರಿಯಲಾರಂಭಿಸಿದ ಮೇಲೆ ಕೃಷಿಯೂ ಬಣ್ಣ-ಮೋಹದ ಮೂಸೆಯಲ್ಲಿ ಹೊಸ ಆಕಾರ ಪಡೆಯಲಾರಂಭಿಸಿತು. ಬಳ್ಳಿ, ಗಿಡ, ಮರಗಳ ಫಲಗಳು ಹಣಕ್ಕೆ ರೂಪಾಂತರಗೊಳ್ಳತೊಡಗಿದವು. ಸುಖದ ವ್ಯಾಖ್ಯೆ ಬೇರೆ ಯಾಯಿತು. ನಾಗರಿಕತೆಯ ಸಂಪರ್ಕವಿಲ್ಲದೆ ರಸ್ತೆ, ಕರೆಂಟು, ಮೊಬೈಲು ರೇಂಜು, ಟಿ.ವಿ. ಹೀಗೆ ನವ ನಾಗರಿಕತೆಯ ಮಾಲಿನ್ಯ ವಿಲ್ಲದೆಯೇ ಕಾಡೊಳಗಡೆಯೇ ಬದುಕುವ ‘ನಿಜವಾದ ಕೃಷಿಕರು’ ‘ಹಸುರುವಾದಿಗಳು’ ಈಗಲೂ ಅಲ್ಲಲ್ಲಿ ಇದ್ದಾರೆ. ಉಸಿರುಗಟ್ಟುವ ತ್ರಿಶಂಕು ನಗರದ ಮಂದಿಗೆ ಇಂಥವರ ಬದುಕೇ ಚೋದ್ಯ.

ಡಾ. ಶಿವರಾಮ ಕಾರಂತರ ‘ಚಿಗುರಿದ ಕನಸು’ ಕಾದಂಬರಿಯಲ್ಲಿ ಶಂಕರ ಎಂಬ ಒಂದು ಪಾತ್ರ ಬರುತ್ತದೆ. ಆತ ಪಾಳು ಬಿದ್ದ ಭೂಮಿಯನ್ನು ನೋಡಿ ಹೇಳುವ ಮಾತು ಇದು. ‘‘ಇಷ್ಟೊಂದು ಒಳ್ಳೆಯ ಭೂಮಿಯನ್ನು ಪಾಳು ಬಿಡಬೇಕೇ? ಈ ದೇಶದಲ್ಲಿ ವಿದ್ಯಾವಂತರು, ವಿಜ್ಞಾನಿಗಳು, ಸಾಹಸಿಗರು ಸಾಕಷ್ಟು ಇಲ್ಲ ಎಂಬುದಕ್ಕೆ ಇದೊಂದೇ ಸಾಕ್ಷಿ’’. ಇಲ್ಲಿ ಬರುವ ವಿಜ್ಞಾನಿಗಳು, ವಿದ್ಯಾವಂತರು, ಸಾಹಸಿಗರು ಎಂಬಲ್ಲಿ ಪರ್ಯಾಯವಾಗಿ ತಜ್ಞರ ಪ್ರಯೋಗಗಳು ಹುಟ್ಟಿಕೊಳ್ಳುತ್ತವೆ. ಕೃಷಿಯಲ್ಲಿ ಈ ಪ್ರಯೋಗ ಪ್ರಯತ್ನಗಳು ವಿಶ್ವವಿದ್ಯಾನಿಲಯದ ಫಲಶ್ರುತಿಗಳು. ಬಹುಶಃ ಈ ತಜ್ಞತೆಯೇ ಅಭಿವೃದ್ಧಿ ಪ್ರಣೀತ ಜಗತ್ತಿನಲ್ಲಿ ಇಂದು ನಿರ್ಣಾಯಕ ವಾಗುತ್ತಿವೆ. ಅಷ್ಟೇ ಪಾರಂಪರಿಕ ನೆಲಮೂಲ ಸುಸ್ಥಿರತೆಗೆ ಅಪಾಯವೂ ಹೌದು. ತೀರಾ ಕಾಡುಬದಿಯಲ್ಲಿ ಅರ್ಥಾತ್ ಕಾಡೊಳಗಡೆಯೇ ಪಾರಂಪರಿಕ ಜ್ಞಾನ ಬಳಸಿ ಸಹಜ, ಸಾವಯವ ಕೃಷಿ ಮಾಡುವ ಹತ್ತಾರು ಮಾದರಿಗಳು ಮಲೆನಾಡಿನಲ್ಲಿ ಈಗಲೂ ಇದೆ. ಗಾಂಧಿವಾದಿ ಚೇರ್ಕಾಡಿ ರಾಮಚಂದ್ರ ರಾಯರು ಏರುಗುಡ್ಡದ ಮೇಲೆ ಐದು ದಶಕಗಳ ಹಿಂದೆ ಪ್ರಾಣಿ, ಸಸ್ಯಜನ್ಯ ಒಳಪುನಿಗಳನ್ನಷ್ಟೇ ಬಳಸಿ ಸಾಧಿಸಿದ ಯಶೋಗಾಥೆ ಎಲ್ಲರಿಗೂ ಗೊತ್ತೇ ಇದೆ. ಜಪಾನಿನ ಫುಕೋಕಾ ರಾಮಚಂದ್ರ ರಾಯರಿಗೆ ಗೊತ್ತೇ ಇಲ್ಲ. ರಾಯರಿಗೆ ರಾಯರೇ ಮಾದರಿ. ಇದೇ ಆದರ್ಶದಲ್ಲಿ ಕಾಡೊಳಗೆ ತುಂಡು ತುಂಡು ಭೂಮಿಯಲ್ಲಿ ಆಶ್ರಮದ ರೀತಿ ಬಹುಬೆಳೆಗಳನ್ನು ಬೆಳೆಸಿ ಯಶಸ್ವಿಯಾದ ಮಾದರಿ ಕೃಷಿ ಹಸಿರುದ್ವೀಪ ಬೆಳಕಿಗೆ ಬರಬೇಕು. ಚೇರ್ಕಾಡಿಯ ಈ ಅಜ್ಞಾತ ಶಿಷ್ಯರು ಭೂಮಿಯನ್ನು ಹಾಳುಗೆಡಹದೆ ಬಡಿದು ಬಗ್ಗಿಸಿ ಮಟ್ಟಸ ಮಾಡದೆ ಇರುವ ಸ್ಥಿತಿಯಲ್ಲೇ ಎಲ್ಲವನ್ನೂ ಬೆಳೆಸಿ ಗೆದ್ದ ಕತೆಗಳು ಗಮನೀಯ. ಶ್ರೀಮಂತರು ಅನುಭವಿಸುವ ನದಿಹೊಳೆ, ನೀರಾಶ್ರಯದ ಸಮತಟ್ಟಾದ, ಸಾವಯುಕ್ತ ಭೂಮಿಯಲ್ಲಿ ಆಳಾಗಿ ದುಡಿಯಲು ಬರುವ ಕೃಷಿಯಾಳು ಬರುತ್ತಿರುವುದು ಅದೇ ಶ್ರೀಮಂತರು ಬೇಲಿ ಹಾಕದೆ ಬಿಟ್ಟ ಏರುಗುಡ್ಡದ, ಕಲ್ಲು ಬಂಡೆಗಳ ನೀರೇ ಇಲ್ಲದ ಬರೀ ಹಾಳು ಮೂಳು ಬರಡು ಜಾಗಗಳಲ್ಲಿ ಅದೇ ಧನಿಕರ ಮನೆಯಿಂದಲೇ ಒಯ್ದ ಬೀಜ, ಗಿಡ ನೆಟ್ಟು ಅಲ್ಲಿಂದಲೇ ನೀರು ಹೊತ್ತು, ಮುಂದೆ ಬಾವಿಯೋ ಕೊಳವೆ ಬಾವಿಯೋ ತೋಡಿ ಬೆಳಗ್ಗೆ- ಸಂಜೆ ಕುಟುಂಬವಿಡೀ ದುಡಿದು, ಸ್ವಸಹಾಯ ಗುಂಪಿನ ಪಾಲು ಸೇವೆ ಪಡೆದು, ಕಿರುಸಾಲ ಮಾಡಿ ಇದೀಗ ಇವರೆಲ್ಲಾ ತಮ್ಮ ತಮ್ಮ ತುಂಡು ತುಂಡು ಭೂಮಿಯಲ್ಲೇ ನಿಧಾನವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ನಮ್ಮೂರಲ್ಲೇ ಇರುವ ದೇವಪ್ಪ, ಐತಪ್ಪ, ಸಂಜೀವ, ಶೀನ, ಬಾಬು, ಕೃಷ್ಣಪ್ಪ ಮೊದಲಾದ ಗಿರಿವಾಸಿಗಳ ಪುಟ್ಟ ಪುಟ್ಟ ಹಸಿರು ಜಗತ್ತು, ಅದರೊಳಗಡೆ ಇರುವ ಬೆಳೆ ವೈವಿಧ್ಯ ಕೈ ಬೀಸಿ ಕರೆಯುತ್ತದೆ.

ಅಬ್ಬಬ್ಬಾ ಅಂದ್ರೆ ಇವರಿಗೆಲ್ಲಾ ಎರಡೆಕ್ರೆಗಿಂತ ಹೆಚ್ಚು ಜಾಗವಿಲ್ಲ. ಅಕ್ರಮವಂತೂ ಇಲ್ಲವೇ ಇಲ್ಲ. ಈ ಪುಟ್ಟ ಭೂಮಿಯೊಳಗಡೆ ಎಲ್ಲವೂ ಇರಬೇಕು. ತರಕಾರಿ, ತೆಂಗು, ಬಾಳೆ, ಅಡಿಕೆ, ಮೆಣಸು, ಹೈನುಗಾರಿಕೆ, ಕೋಳಿ, ಜೇನು, ಹಣ್ಣು ಹಂಪಲು, ಹೊರಗಡೆ ಸಿಗುವ ಎಲ್ಲಾ ಗಿಡಬಳ್ಳಿ ಬೇರುಗಳನ್ನು ತುಂಡು ತುಂಡು ನೆಟ್ಟು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಇರುವ ಬೆಳಕು, ಮಣ್ಣು, ನೀರಲ್ಲಿ ಮೊಳೆದು ನುಸುಳಿ ಸುಳಿದು ಹಬ್ಬಿ ನಿಬಿಡ ಕಾಡು-ಕೃಷಿಯಾಗಿ ಖುಷಿ ಕೊಡುತ್ತದೆ. ಈ ಹಸಿರು ಆಶ್ರಮದ ಬಾಗಿಲಲ್ಲೇ ತೋರಣ ಕಟ್ಟಿದ ಕಾಳು ಮೆಣಸು, ಅಂಗಳಕ್ಕೆ ಬೀಳುವ ಗೊಡಂಬಿ, ಎಲ್ಲೆಲ್ಲಿ ಅಂಗೈಯಗಲ ಜಾಗ ಇದೆಯೋ ಅಲ್ಲೆಲ್ಲಾ ಚಿಗುರಿದ ತರಕಾರಿ, ಸೊಪ್ಪುಗಳು; ಹಟ್ಟಿಯ ಸೆಗಣಿ-ಗಂಜಲ ಉಂಡ ಬೆಳೆಗಳು. ಮನೆಬಳಕೆಯ ನೀರನ್ನು ಮರುಬಳಸುವ ಕ್ರಮ. ಮನೆಯ ಹಿರಿಯಮ್ಮನ ತರಕಾರಿ, ಬೆಳೆಗಳ ಕಟಾವು, ಬೀಜ ಜೋಪಾನ, ಕೊಯ್ಲಿನ ಸೂಕ್ಷ್ಮತೆಗಳು ಎಲ್ಲವೂ ಅದ್ಭುತ. ಕೃಷಿಭೂಮಿಗೆ ಸುತ್ತ ಜೀವಂತ ಬೇಲಿ, ತೆಂಗಿನ ಬುಡದ ಗುಂಡಿಗೆ ಮಳೆ ನೀರು ಇಂಗಿಸುವ ವಿಧಾನ, ಕಾಡುಬಳ್ಳಿಯನ್ನು ಮರದಿಂದ ಎಳೆದು ಕೆಂಪಿರುವೆ ತರಕಾರಿಗೆ ಮುತ್ತುವಂತೆ ಮಾಡಿ ರೋಗಕಳೆಯುವ ತಂತ್ರ, ಬರೀ ಬೂದಿ, ಸುಡು ಮಣ್ಣು, ಗೊಬ್ಬರದ ಸ್ಲರಿಯನ್ನು ಚೋದಕವಾಗಿ ಗಿಡಗಳಿಗೆ ಬಳಸುವ ಕ್ರಮ ಮಾದರಿಯದು.

ಕೃಷಿಯ ವೈವಿಧ್ಯ, ಸೌಂದರ್ಯ ಉಳಿಯುವುದು ಇಂಥ ಸಣ್ಣ ಕೃಷಿಕರಿಂದ ಹೊರತು ಖಂಡಿತ ಎಸ್ಟೇಟ್ ಕ್ರಮದ ಶ್ರೀಮಂತ ಕೃಷಿಕರಿಂದ ಅಲ್ಲವೇ ಅಲ್ಲ. ಇಂಥ ಕಾಡುವಾಸಿ ಕೃಷಿಕರು ನಿರ್ಸಗ ವನ್ನು ಭೂಮಿಯೊಳಕ್ಕೆ ಕಿವಿಗೊಟ್ಟು ಅಳೆಯಬಲ್ಲರು. ಭೂಮಿಯ ಮೇಲೆ ಯಾವ ಗಿಡ, ಯಾವ ಹುಲ್ಲು, ಬೇಲಿಯಂಚಿನ ಹುಳು, ಕೀಟಗಳ ಲೆಕ್ಕ ಇಡಬಲ್ಲರು. ಮಣ್ಣು, ಆಹಾರ ವೈವಿಧ್ಯತೆ, ನೀರು, ಮಳೆ, ತಳಿ ಸಾಧ್ಯತೆಗಳೆಲ್ಲಾ ಉಳಿಸಲು ಇಂಥ ಸಣ್ಣ ಸಣ್ಣ ಹಿಡುವಳಿದಾರರಿಂದ ಮಾತ್ರ ಸಾಧ್ಯವೇ ಹೊರತು ಸಾವಿರಾರು ಎಕರೆಯ ಶ್ರೀಮಂತ ಕೃಷಿಕರಿಂದಲ್ಲ.

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X