ಅತೃಪ್ತರು ಕರೆ ಮಾಡಿದ ವಿಚಾರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

ಮೈಸೂರು: ಅತೃಪ್ತರಲ್ಲಿ ಇಬ್ಬರು ಕರೆ ಮಾಡಿದ್ದರು ಎಂದು ಹೇಳಿದ್ದೇನೆ, ಪದೇ ಪದೇ ಆ ವಿಚಾರ ಪ್ರಸ್ತಾಪ ಬೇಡ. ಕರೆ ಮಾಡಿಲ್ಲ ಎಂದು ಹೇಳಿರುವವರು ನನಗೆ ಕರೆ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಬಿಜೆಪಿಯವರೇ ಯಡಿಯೂರಪ್ಪ ವಿರುದ್ಧ ಮತ ಹಾಕಬಹುದೇ ? ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ, ನಿರೀಕ್ಷೆಯೂ ಇಲ್ಲ ಎಂದು ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದರು.
ನಾನು ನನ್ನ ಮಗನ ಮೂರನೇ ವರ್ಷದ ಪುಣ್ಯ ತಿಥಿಗೆ ಬಂದಿದ್ದೇನೆ. ಅಲ್ಲಿಯ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
Next Story