ಪಾದುವಾ ಕಾಲೇಜಿನಲ್ಲಿ CELLULOID ಕಾರ್ಯಕ್ರಮ

ಮಂಗಳೂರು: ಪಾದುವ ಕಾಲೇಜಿನ ನಾಟಕ ತಂಡ ಪಾದುವ ರಂಗ ಅಧ್ಯಯನ ಕೇಂದ್ರ ಹಾಗೂ ಅಸ್ತಿತ್ವ ಮಂಗಳೂರು, ಇದರ ಸಹಭಾಗಿತ್ವದಲ್ಲಿ ಸಿನೆಮಾ ರಸಗ್ರಹಣ ಕಾರ್ಯಗಾರವನ್ನು ಹಮ್ಮಿಕೊಂಡಿದೆ.
ಇದರ ಮೊದಲ ಭಾಗವಾಗಿ ಜು.31 ರಂದು ಜಪಾನಿನ ಪ್ರಸಿದ್ಧ ನಿರ್ದೇಶಕ 'ಅಕಿರಾ ಕುರೋಸಾವಾ' ನಿರ್ದೇಶನದ "ರಾಶೊಮನ್" ಸಿನೇಮಾವನ್ನು ಪ್ರದರ್ಶಿಸಲಿದೆ ಹಾಗೂ ಸಿನೇಮಾದ ಪ್ರದರ್ಶನದ ಬಳಿಕ ಚರ್ಚೆ, ವಿಚಾರ ವಿನಮಯ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಸಾಧ್ಯವಾದಷ್ಟು ಆಸಕ್ತ ಸಿನೆಮಾಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪ್ರತೀ ತಿಂಗಳಿನಲ್ಲಿ ಒಂದು ಸಿನೇಮಾವನ್ನು ಪ್ರದರ್ಶಿಸಿ ಅದರ ಮೇಲೆ ವಿಚಾರ ವಿನಿಮಯ ಮಾಡಿಕೊಳ್ಳುವ ಯೋಜನೆ ಈ ತಿಂಗಳಿನಿಂದ ಪಾದುವಾ ಕಾಲೇಜಿನಲ್ಲಿ ನಿರಂತರವಾಗಿ ನಡೆಯಲಿದೆ. ಬುಧವಾರ ಸಂಜೆ ಸರಿಯಾಗಿ 6.15ಘಂಟೆಗೆ ಈ ಕಾರ್ಯಕ್ರಮ ಪಾದುವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
Next Story





