ಕೆ.ಸಿ.ರೋಡ್ ನಲ್ಲಿ ರಕ್ತದಾನ ಶಿಬಿರ

ಮಂಗಳೂರು, ಜು.28: ಎಸೆಸ್ಸೆಫ್ ತಲಪಾಡಿ ಸೆಕ್ಟರ್, ಎಸೆಸ್ಸೆಫ್ ಕೆ.ಸಿ.ರೋಡ್ ಯುನಿಟ್, ದ.ಕ.ಜಿಲ್ಲಾ ಎಸೆಸ್ಸೆಫ್ ಬ್ಲಡ್ ಸೈಬೋ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಕೆ.ಸಿ.ರೋಡ್ ಅಲ್ಮಿಸ್ಬಾಹ್ ಝಹ್ರತಲ್ ಖುರಾನ್ ಪ್ರೀ ಸ್ಕೂಲ್ ನಲ್ಲಿ ರವಿವಾರ ನಡೆಯಿತು.
ಪ್ರೀ ಸ್ಕೂಲ್ ಅಧ್ಯಕ್ಷ ಮುಸ್ತಫ ಝುಹುರಿ ದುಆಗೈದರು. ದ.ಕ.ಜಿಲ್ಲಾ ಸುನ್ನಿ ಜಮೀಯತುಲ್ ಮುಸ್ಲಿಮೀನ್ ಅಧ್ಯಕ್ಷ ಪಿ.ಮುಹಮ್ಮದ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಎಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಸಿರಾಜುದ್ದೀನ್ ವಿ.ಎ.ಎಚ್ ಅಧ್ಯಕ್ಷತೆ ವಹಿಸಿದರು.
ಎಸ್‌ಎಂಎ ತಲಪಾಡಿ ರೇಂಜ್ ಅಧ್ಯಕ್ಷ ಎಂ.ಎಂ.ಅಬ್ಬಾಸ್ ಹಾಜಿ, ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಸೈಯದ್ ಕುಬೈಬ್ ತಂಙಳ್, ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಉಪಾಧ್ಯಕ್ಷ ಇಸ್ಮಾಯಿಲ್ ಕೆ.ಸಿ.ನಗರ, ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಬ್ಲಡ್ ಇನ್‌ಚಾರ್ಜ್ ಹಕೀಮ್ ಪೂಮಣ್ಣು, ಡೈಮಂಡ್ ವೆಲ್ಫೇರ್ ಅಸೋಸಿಯೇಶನ್‌ನ ನಿರ್ದೇಶಕ ಶಂಶುದ್ದೀನ್, ಖಿದ್ಮತ್ ಫ್ರೆಂಡ್ಸ್ ಅಧ್ಯಕ್ಷ ನಝೀರ್ ಕೆ.ಸಿ.ನಗರ, ಎಸೆಸ್ಸೆಫ್ ಕೆ.ಸಿ.ರೋಡ್ ಅಧ್ಯಕ್ಷ ಹಂಝ ಕೆ.ಸಿ.ರೋಡ್, ತಲಪಾಡಿ ಗ್ರಾಪಂ ಸದಸ್ಯ ಹಸೈನಾರ್, ದ.ಕ.ಜಿಲ್ಲಾ ವಕ್ಫೃ್ ಬೋರ್ಡ್ ಸಲಹಾ ಸಮಿತಿಯ ಸದಸ್ಯ ಉಸ್ಮಾನ್ ಪಳ್ಳ, ಕೆ.ಸಿ.ರೋಡ್ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಕೆ.ಎಚ್. ಮುಹಮ್ಮದ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಇಬ್ರಾಹೀಂ ಕೊಮರಂಗಳ ಉಪಸ್ಥಿತರಿದ್ದರು.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಸಂಯೋಜಕ ಪ್ರವೀಣ್ ಅವರನ್ನು ಗೌರವಿಸಲಾಯಿತು. ಎಸೆಸ್ಸೆಫ್ ತಲಪಾಡಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ವೀಝ್ ಸ್ವಾಗತಿಸಿದರು. ಕಾರ್ಯದರ್ಶಿ ಮುಸ್ತಫ ವಂದಿಸಿದರು.







