ಮಂಗಳೂರು: ಜೂಜಾಟ ಆಡುತ್ತಿದ್ದ ಒಂಬತ್ತು ಮಂದಿ ಬಂಧನ
ಮಂಗಳೂರು, ಜು.28: ನಗರದ ಅಳಕೆ ಮಾರುಕಟ್ಟೆ ಸಮೀಪದಲ್ಲಿ ಜೂಜಾಟ ಆಡುತ್ತಿದ್ದ ಆರೋಪಿಗಳನ್ನು ಬಂದರ್ ಪೊಲೀಸರು ರವಿವಾರ ಬೆಳಗ್ಗೆ ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಶಂಭು, ಮೈಲಾರಿ ಅಂಬಿಗ, ಹನುಮಂತ, ಶಿವರಾಜ್, ಅಶೋಕ್, ಸಿದ್ದಪ್ಪ, ಮುಹಮ್ಮದ್ ವೌಲಾನಸಾಬ್, ಹನುಮಂತ, ಭೀಮಪ್ಪ ಬಂಧಿತ ಆರೋಪಿಗಳು.
ಆರೋಪಿಗಳಿಂದ 3,540 ರೂ. ನಗದು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಜೂಜಾಟಕ್ಕೆ ಬಳಸಿದ ಇಸ್ಪೀಟ್ ಎಲೆಗಳು, ದಿನಪತ್ರಿಕೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





