ಗಾಂಜಾ ಸೇವನೆ: ಆರು ಮಂದಿ ವಶಕ್ಕೆ
ಉಡುಪಿ, ಜು.28: ಗಾಂಜಾ ಸೇವನೆಗೆ ಸಂಬಂಧಿಸಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜು.27ರಂದು ಮಲ್ಪೆ ಪೊಲೀಸರು ಮಲ್ಪೆಬಸ್ ನಿಲ್ದಾಣದ ಬಳಿ ಕಲ್ಮಾಡಿಯ ದೀಕ್ಷಿತ್ ಪೂಜಾರಿ(28), ಉಡುಪಿ ಸೆನ್ ಅಪರಾಧ ಪೊಲೀಸರು ಬನ್ನಂಜೆ ಸಾರಥಿ ಹೊಟೇಲ್ ಹಿಂಭಾಗ ಅಜ್ಜರಕಾಡು ನಿವಾಸಿ ಪುನೀತ್(18) ಹಾಗೂ ಬನ್ನಂಜೆ ನಾರಾಯಣ ಗುರು ಮಂದಿರ ಹಿಂಭಾಗ ಸ್ಥಳೀಯ ನಿವಾಸಿ ಯತೀಶ್(19), ಬನ್ನಂಜೆ ಸರ್ಕಲ್ ಬಳಿ ಸ್ಥಳೀಯ ನಿವಾಸಿ ಚೇತನ್(26), ಉಡುಪಿ ಡಿಸಿಐಬಿ ಪೊಲೀಸರು ಕಲ್ಸಂಕ ರಾಯಲ್ ಗಾರ್ಡನ್ ಬಳಿ ಉಪ್ಪೂರು ಕೊಳಲಗಿರಿಯ ಪವಡಪ್ಪಬಿಳಗಲ್(25) ಮತ್ತು ಉಡುಪಿ ಸಿಟಿ ಬಸ್ ನಿಲ್ದಾಣ ಬಳಿ ಅಲೆವೂರಿನ ಸತೀಶ್ ಎಸ್.(32) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇವರೆಲ್ಲರನ್ನು ಮಣಿಪಾಲ ಕೆಎಂಸಿಯ ಫಾರೆನ್ಸಿಕ್ ಮೆಡಿಸಿನ್ ವಿಭಾಗಕ್ಕೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ತಜ್ಞರು ನೀಡಿದ ವರದಿಯಂತೆ ಇವರೆಲ್ಲ ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದರಂತೆ ಮಲ್ಪೆ, ಸೆನ್ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.





