ಬೆಳ್ತಂಗಡಿ: 1.575 ಕಿ.ಗ್ರಾಂ ಗಾಂಜಾ ವಶ; ಆರೋಪಿ ಸೆರೆ
ಬೆಳ್ತಂಗಡಿ: ಬೀದರ್ ಮೂಲದ ವ್ಯಕ್ತಿಯೋರ್ವನಿಂದ ಗಾಂಜಾ ಖರೀದಿಸಿ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬೆಳ್ತಂಗಡಿ ಪೊಲೀಸರು ರವಿವಾರ ಕುವೆಟ್ಟು ಗ್ರಾಮದ ಮದ್ದಡ್ಕ ಸಮೀಪದ ಕಿನ್ನಿಗೋಳಿ ರೇಷ್ಮೆ ರಸ್ತೆ ಜಂಕ್ಷನ್‍ನಲ್ಲಿ ಬಂಧಿಸಿ ಆತನಿಂದ 1.575 ಕಿ.ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಳಿಯ ಗ್ರಾಮದ ಗೇರುಕಟ್ಟೆ ಕಜೆ ಮನೆ ನಿವಾಸಿ ಉಮರ್ ಫಾರೂಕ್ (30) ಬಂಧಿತ ಆರೋಪಿ.
ಆತನಿಂದ 1.575 ಕಿ.ಗ್ರಾಂ.ನ ಸುಮಾರು 15,000 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಪೊಲೀಸ್ ಉಪ-ನಿರೀಕ್ಷಕ ರವಿ ಬಿ.ಎಸ್.ನೇತೃತ್ವದಲ್ಲಿ ಸಿಬಂದಿ ಅಶೋಕ್ ಕುಮಾರ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಂಧಿತ ಆರೋಪಿ ಫಾರೂಕ್ ವಿರುದ್ಧ ಬೆಳ್ತಂಗಡಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





