ಪುತ್ತೂರು: ಉದ್ಯಮಿ ರಾಮಚಂದ್ರ ಕಿಣಿ ನಿಧನ

ಪುತ್ತೂರು: ನಗರದ ಹಿರಿಯ ಉದ್ಯಮಿ ಇಲ್ಲಿನ ಗುರುಪುರ ದೇವಣ್ಣ ಕಿಣಿ ಸಂಸ್ಥೆಯ ಪಾಲುದಾರ ಜಿ. ರಾಮಚಂದ್ರ ಕಿಣಿ (76) ಹೃದಯಾಘಾತ ದಿಂದ ಭಾನುವಾರ ಬೆಂಗಳೂರಿನ ತನ್ನ ಪುತ್ರಿಯ ಮನೆಯಲ್ಲಿ ನಿಧನರಾದರು.
ಪುತ್ತೂರಿನ ಶ್ರೀ ಮಹಮ್ಮಾಯಿ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದ ರಾಮಚಂದ್ರ ಕಿಣಿ ಅವರು ಸುಮಾರು 55 ವರ್ಷಗಳಿಂದ ಪುತ್ತೂರಿನಲ್ಲಿ ಜಿನಸು ವ್ಯಾಪಾರಿಯಾಗಿದ್ದರು. ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದ ಜೀಪ್ ಬ್ರಾಂಡ್ ತೆಂಗಿನ ಎಣ್ಣೆಯ ತಯಾರಕರಾಗಿದ್ದರು.
ಬೆಂಗಳೂರಿನಲ್ಲಿರುವ ತನ್ನ ಪುತ್ರಿಯ ಮನೆಗೆ ಹೋಗಿದ್ದ ಅವರು ಅಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆಯು ಸೋಮವಾರ ಪುತ್ತೂರು ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





