ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ

ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಜು. 28: ಮಲೆನಾಡಿನಲ್ಲಿ ಮಳೆ ಮುಂದುವರಿದಿದೆ. ಭಾನುವಾರ ಕೂಡ ಜಿಲ್ಲೆಯಾದ್ಯಂತ ಉತ್ತಮ ವರ್ಷಧಾರೆಯಾಗಿದ್ದು, ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಕ್ರಮೇಣ ಹೆಚ್ಚಳ ಕಂಡುಬರುತ್ತಿದೆ.
ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವದಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಮಾಣಿಯಲ್ಲಿ 35 ಮಿಲಿ ಮೀಟರ್ (ಮಿ.ಮೀ.), ಯಡೂರಿನಲ್ಲಿ 52 ಮಿ.ಮೀ., ಹುಲಿಕಲ್ನಲ್ಲಿ 46 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 27 ಮಿ.ಮೀ. ಮಳೆಯಾಗಿದೆ.
ಉಳಿದಂತೆ ಶಿವಮೊಗ್ಗದಲ್ಲಿ 3.4 ಮಿ.ಮೀ., ಭದ್ರಾವತಿಯಲ್ಲಿ 4 ಮಿ.ಮೀ., ತೀರ್ಥಹಳ್ಳಿಯಲ್ಲಿ 10 ಮಿ.ಮೀ., ಸಾಗರದಲ್ಲಿ 3 ಮಿ.ಮೀ., ಸೊರಬದಲ್ಲಿ 7 ಮಿ.ಮೀ., ಶಿಕಾರಿಪುರದಲ್ಲಿ 0.6 ಮಿ.ಮೀ ಹಾಗೂ ಹೊಸನಗರದಲ್ಲಿ 15.6 ಮಿ.ಮೀ ವರ್ಷಧಾರೆಯಾಗಿದೆ.
ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1773.10 (ಗರಿಷ್ಠ ಮಟ್ಟ : 1819) ಅಡಿಯಿದೆ. 12,494 ಕ್ಯೂಸೆಕ್ ಒಳಹರಿವಿದ್ದು, 60.92 ಕ್ಯೂಸೆಕ್ ಹೊರಹರಿವಿದೆ. ಕಳೆದ ವರ್ಷ ಇದೇ ವೇಳೆ ಡ್ಯಾಂನಲ್ಲಿ 1806 ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಡ್ಯಾಂನ ನೀರಿನ ಮಟ್ಟ 142 ಅಡಿ 5 (ಗರಿಷ್ಠ ಮಟ್ಟ : 186) ಇಂಚು ಇದೆ. ಕಳೆದ ವರ್ಷ ಇದೇ ವೇಳೆ ಡ್ಯಾಂನ ನೀರಿನ ಮಟ್ಟ 184 ಅಡಿಯಿತ್ತು. ಪ್ರಸ್ತುತ 5006 ಕ್ಯೂಸೆಕ್ ಒಳಹರಿವಿದ್ದು, 215 ಕ್ಯೂಸೆಕ್ ಹೊರಹರಿವಿದೆ.







