ಜಪಾನ್ನಲ್ಲಿ: ಪ್ರಬಲ ಭೂಕಂಪ

ಟೋಕಿಯೊ,ಜು.28: ಜಪಾನ್‌ನ ಅತ್ಯಧಿಕ ಜನಸಂಖ್ಯೆಯಿರುವ ಹಾಗೂ ಬೃಹತ್ ದ್ವೀಪವಾದ ಹೊನ್ಶುದಲ್ಲಿ ರವಿವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆಯೆಂದು ಅಮೆರಿಕದ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ವರದಿ ಮಾಡಿದೆ.
ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದ ಕೇಂದ್ರ ಹಬಿಂದು ಹೊನ್ಶು ದ್ವೀಪದ 375.8 ಕಿ.ಮೀ. ನೆಲದಾಳಲ್ಲಿತ್ತು. ಆದರೆ ಈವರೆಗೆ ಸುನಾಮಿ ಅಪ್ಪಳಿಸುವ ಸಾಧ್ಯತೆಯ ಬಗ್ಗೆ ಮುನ್ಸೂಚನೆಯನ್ನು ನೀಡಲಾಗಿಲ್ಲವೆಂದು ತಿಳಿದುಬಂದಿದೆ.
ಭೂಕಂಪದಲ್ಲಿ ಯಾವುದೇ ಸಾವುನೋವು ಹಾಗೂ ಕಟ್ಟಡಗಳಿಗೆ ಹಾನಿ ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲ.
Next Story





