Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬೀದಿಯಿಂದೆದ್ದ ಕವಿತೆಗಳು...!

ಬೀದಿಯಿಂದೆದ್ದ ಕವಿತೆಗಳು...!

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ29 July 2019 12:02 AM IST
share
ಬೀದಿಯಿಂದೆದ್ದ ಕವಿತೆಗಳು...!

ಸೆಫ್ ಜಾನ್ಸೆ ಕೊಟ್ಟೂರು ಅವರ ‘ಹುಲ್ಲಿಗೆ ಹುಟ್ಟಿದ ಬೀದಿ’ ಕವನ ಸಂಕಲ ಹೆಸರೇ ಹೇಳುವಂತೆ ಹುಲ್ಲುಗರಿಯ ಬೀದಿಗೆ ಹುಟ್ಟಿದವುಗಳು. ಇದು ಲೇಖಕರ ಎರಡನೆಯ ಸಂಕಲನ. ಸಾಮಾಜಿಕ ನ್ಯಾಯವನ್ನು ಸಮರ್ಥಿಸುವ, ಜಾತಿ ಧರ್ಮದ ಅನ್ಯಾಯವನ್ನು ಖಂಡಿಸುವ, ಪ್ರೇಮದ ಪರವಾಗಿ ವಾದಿಸುವ, ನೋವಿಗೆ ದನಿ ನೀಡುವ ಸಾಲುಗಳೇ ಈ ಸಂಕಲನದ ಹೆಚ್ಚುಗಾರಿಕೆ. ವಿಮರ್ಶಕ ಕೆ. ಪಿ. ಸುರೇಶ್ ಅವರು ಹೇಳುವಂತೆ ‘‘ಆಯಾಸವಾಗದಂತೆ ಈ ಕವನಗಳು ಓದಿಸಿಕೊಂಡಿವೆ. ಈ ಮನಂಬುಗುವ ಬಗೆ ಕಾವ್ಯಕ್ಕೆ ಮುಖ್ಯ. ಇಲ್ಲಿರುವ ಕವಿತೆಗಳಿಗೆ ಆ ಓಘವಿದೆ. ಆದುದರಿಂದ ಅವರ ಮುಂದಿನ ಕಾವ್ಯದ ಹೆಜ್ಜೆಗತಿಗಳು ಸ್ಪಷ್ಟ. ಸಾಮಾಜಿಕತೆಯನ್ನು ಕಾವ್ಯವಾಗಿಸುವಾಗ ಅದಕ್ಕೊಂದು ಪ್ರಮಾಣ, ಘಟ್ಟ, ಸಮಾಪನದ ಕೌಶಲ್ಯ ಸಾಧಿಸಬೇಕು. ಜಾನ್ಸೆಯವರು ಇದನ್ನು ಕರಗತಗೊಳಿಸಿಕೊಳ್ಳುವ ಸೂಚನೆ ಇಲ್ಲಿನ ಕವನಗಳಲ್ಲಿವೆ....’’
ಸುಮಾರು 42 ಕವಿತೆಗಳು ಇಲ್ಲಿವೆ. ದಮನಿತರಿಗಾಗಿ ಡಿಕ್ಲೇಶನ್‌ಗಳು, ಪ್ರೀತಿ ಮತ್ತು ಮಳೆ, ಬಂಜೆತನದ ಸ್ಲೋಮೋಶನ್‌ಗಳು, ಬಿಲಿಮಿಯಾ, ಅಶಾಂತ ಸ್ವರ್ಗಗಳು, ಅತ್ಯಾಚಾರಿ ಕಡು ಪಶ್ಚಾತ್ತಾಪಗಳು, ಬುರ್ಖಾ ಗುಂಬಜ್, ಸುಟ್ಟ ನಕ್ಷತ್ರಗಳ ಬೀದಿಯಲ್ಲಿ, ಕನಸುಗಳೊಂದಿಗೆ ಮಲಗಲಾಗುವುದಿಲ್ಲ....ಮೊದಲಾದ ಕವನಗಳ ತಲೆಬರಹಗಳೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕಾವ್ಯದ ಬೆಂಕಿ ಕಾವನ್ನು ಹೊರಗೆಡಹುತ್ತದೆ. ಎಲ್ಲವೂ ಪ್ರತಿಭಟನೆಯ ನೆಲೆಯಿಂದ ಹುಟ್ಟಿದವುಗಳು. ಕಲೆಗಾಗಿ ಕಲೆ ಎನ್ನುವ ಕಾವ್ಯ ರಮ್ಯತೆಯ ಕುಸುರಿತನಗಳನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಕವಿಯೊಳಗಿರುವ ಬದ್ಧತೆಗಳಿಗೆ ಕಾವ್ಯ ತಲೆಬಾಗಿದಂತಿದೆ. ಕವಿಯೇ ಮೊದಲ ಮಾತಿನಲ್ಲಿ ಹೀಗೇ ಹೇಳಿಕೊಳ್ಳುತ್ತಾರೆ ‘‘ಅಸೂಯಪರ ದುರಾಸೆಯ ಹೊಟ್ಟೆಯಿಂದುದಿಸುತ್ತಿರುವ ಜಾತಿ, ಧರ್ಮ, ಹಣ, ರಾಜಕಾರಣ, ಭೋಗಾತ್ಮಕತೆಯ ಸಮೀಕರಣದ ಪಿಡುಗುಗಳು ಕೊಬ್ಬಿ ಬೋಧಿಸುತ್ತಿರುವ ಸಾಮಾಜಿಕ ಕ್ರೌರ್ಯಗಳನ್ನು ತನ್ನೊಡಲಿನ ಸಹಜ ಪ್ರಕ್ರಿಯೆಯನ್ನಾಗಿ ಸ್ವೀಕರಿಸಬಲ್ಲ ದಿಕ್ಕೆಟ್ಟ ಸ್ಥಿತಿಗೆ ಬಂದು ನಿಂತಿರುವ ರಕ್ತಗತ ಮನುಷ್ಯನ ಆಧುನಿಕ ಅಸ್ಥಿತ್ವದ ಕುರಿತೇ ಕಾವ್ಯ ಮಿಡಿಯಬೇಕಾಗಿದೆ. ಜೀತಕ್ಕಿಟ್ಟ ಕ್ಷುದ್ರ ಆವಾಸಗಳ ಸುತ್ತ ಸುಳಿದಾಡುತ್ತಲೇ ಬೀದಿಯ ತಿರುವುಗಳಲ್ಲಿ ಆರ್ದ್ರಗೊಂಡ ಕೈಗಳ ಹಿಡಿದೇ ಹೊತ್ತುಮೀರಿ ಮಾತನಾಡಬೇಕಾಗಿದೆ....’’ ಕವಿಯ ಈ ಆದೇಶವನ್ನು ಇಲ್ಲಿರುವ ಕವಿತೆಗಳು ಯಥಾವತ್ತಾಗಿ ಪಾಲಿಸುತ್ತವೆ.
‘‘...ಅನ್ನವೆಂಬುದು ಬಣ್ಣದ ಸಮಸ್ಯೆಯಾಗಲಿ
ನಿತ್ಯದ ನಿಯತ್ತಿನ ಕರ್ಮವಾಗಿ ಉಳಿದಿಲ್ಲ
ಬದಲಾಗಿ ಅನ್ನವೇ ಬದುಕಾಗಿ
ಉಸಿರುಗಳಿಗೆ ಅಂಟಿಸಿದ ಬೆಲೆಯ ಚೀಟಿಯಾಗಿವೆ....’’ ‘ಬುಲಿಮಿಯಾ’ ಕವಿತೆ ಹಸಿವಿನ ಒಡಲಲ್ಲಿ ಧಗಿಸುವ ಕಿಚ್ಚಾಗಿದೆ.
‘ಲೇಖನಿಯ ವೀರ್ಯತೆಯನ್ನು/ ಪರ-ವಿರೋಧದ ಟೊಳ್ಳಿಗಿಳಿಸಲಾರೆ/ರಕ್ತ ಸಿಕ್ತ ಹಕ್ಕಿಯ/ ಉರಿಗಟ್ಟುವ ನೋವಿಗೊಂದಿಷ್ಟು ತಣ್ಣನೆಯ ಮದ್ದು /ಅದರಾಚೆ ಅಕ್ಷರವ ದಣಿಸಲಾರೆ....’ ಎನ್ನುವ ಸಾಲು ಕವಿಯ ಕಾವ್ಯದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಇಂತಹ ಉದ್ದೇಶ ಕಾವ್ಯದ ೆಗ್ಗಳಿಕೆಯೂ ಹೌದು, ಮಿತಿಯೂ ಹೌದು.
ರೇಣುಕಾ ಪ್ರಕಾಶನ ಹಾಸನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 124. ಮುಖಬೆಲೆ 100 ರೂಪಾಯಿ. ಆಸಕ್ತರು 9731709317 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X