ವಿದೇಶಿ ಕರೆನ್ಸಿ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು
ಬೆಂಗಳೂರು, ಜು.29: ಕಡಿಮೆ ಮೊತ್ತಕ್ಕೆ ವಿದೇಶಿ ಕರೆನ್ಸಿ ಕೊಡುವುದಾಗಿ ವಂಚಿಸಿರುವ ಘಟನೆ ಇಲ್ಲಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಟೊ ಚಾಲಕ ಸೈಯದ್ ಮುಝೀಬ್ ವಂಚನೆಗೊಳಗಾದವರು ಎಂದು ತಿಳಿದುಬಂದಿದೆ.
ಜು.26 ರಂದು ಮುಝೀಬ್ಗೆ 5,500 ಸೌದಿ ಕರೆನ್ಸಿ ಕೊಡುವುದಾಗಿ ಮಡಿವಾಳಕ್ಕೆ ಕರೆಸಿಕೊಂಡಿದ್ದ ವಂಚಕರು, 1 ಲಕ್ಷ 80 ಸಾವಿರ ರೂ. ಇಂಡಿಯನ್ ಕರೆನ್ಸಿ ತೆಗೆದುಕೊಂಡಿದ್ದಾರೆ. ತದನಂತರ, ಸೌದಿ ಸರಕಾರದ ಚಿಹ್ನೆ ಇರುವ ಚೀಲವೊಂದನ್ನು ನೀಡಿ, ಅದರಲ್ಲಿ ನಗದು ಇದೆ ಎಂದು ನಂಬಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
Next Story