ಸಾವಿರ ರನ್, 100 ವಿಕೆಟ್ ಪಡೆದ ಮೊದಲ ಕ್ರಿಕೆಟರ್ ಎಲ್ಲಿಸ್ ಪೆರ್ರಿ
ಟಿ-20

ಬ್ರಿಂಗ್ಟನ್, ಜು.29: ಆಸ್ಟ್ರೇಲಿಯದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಟಿ-20 ಮಾದರಿಯ ಕ್ರಿಕೆಟ್‌ನಲ್ಲಿ 1,000 ರನ್ ಹಾಗೂ 100 ವಿಕೆಟ್‌ಗಳನ್ನು ಗಳಿಸಿ ಅಪರೂಪದ ಮೈಲುಗಲ್ಲು ತಲುಪಿದ ಮೊದಲ ಪುರುಷ ಹಾಗೂ ಮಹಿಳಾ ಕ್ರಿಕೆಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಪೆರ್ರಿ(ಔಟಾಗದೆ 47) ಹಾಗೂ ನಾಯಕಿ ಮೆಗ್ ಲ್ಯಾನ್ನಿಂಗ್(ಔಟಾಗದೆ 43)ಉತ್ತಮ ಜೊತೆಯಾಟ ನಡೆಸಿ ಆಸ್ಟ್ರೇಲಿಯ ತಂಡ ಮಹಿಳಾ ಆ್ಯಶಸ್ ಟೂರ್‌ನ ಎರಡನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ್ದ 7 ವಿಕೆಟ್‌ಗಳಿಂದ ಜಯ ಸಾಧಿಸಲು ನೆರವಾದರು.
ಪೆರ್ರಿ ರವಿವಾರ ನಡೆದ ಪಂದ್ಯದಲ್ಲಿ ಬೌಂಡರಿ ಬಾರಿಸುವುದರೊಂದಿಗೆ 1000 ರನ್ ಪೂರೈಸಿದರು. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದಿದ್ದ ವರ್ಲ್ಡ್ ಟಿ-20 ಫೈನಲ್‌ನಲ್ಲಿ ಇಂಗ್ಲೆಂಡ್‌ನ ನ್ಯಾಟ್ ಸಿವೆರ್‌ವಿಕೆಟನ್ನು ಉರುಳಿಸಿ 100ನೇ ವಿಕೆಟ್‌ನ್ನು ಪೂರ್ಣಗೊಳಿಸಿದ್ದರು.
28ರ ಹರೆಯದ ಪೆರ್ರಿ ತನ್ನ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ(1,416 ರನ್ ಹಾಗೂ 98 ವಿಕೆಟ್‌ಗಳು)ಈ ಅಪರೂಪದ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಬಾಂಗ್ಲಾದೇಶದ ಶಾಕಿಬ್‌ಅಲ್ ಹಸನ್ 1,471 ರನ್ ಹಾಗೂ 88 ವಿಕೆಟ್‌ಗಳನ್ನು ಉರುಳಿಸುವುದರೊಂದಿಗೆ ಅಫ್ರಿದಿಗೆ ಪೈಪೋಟಿ ನೀಡುತ್ತಿದ್ದಾರೆ.







