ಪಾಕಿಸ್ತಾನದಲ್ಲಿ ಮಿಲಿಟರಿ ವಿಮಾನ ಪತನ; 17 ಸಾವು
ಇಸ್ಲಾಮಾಬಾದ್, ಜು.30: ಪಾಕಿಸ್ತಾನದ ಮಿಲಿಟರಿ ವಿಮಾನವೊಂದು ರಾವಲ್ಪಿಂಡಿಯ ಜನವಸತಿ ಪ್ರದೇಶದ ಮೇಲೆ ಪತನಗೊಂಡಿದ್ದು, ವಿಮಾನದಲ್ಲಿದ್ದ 5 ಮಂದಿ ಸೇರಿದಂತೆ ಒಟ್ಟು 17ಮಂದಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಮೊರಕಾಲು ಗ್ರಾಮದಲ್ಲಿ ವಿಮಾನ ಪತನಗೊಂಡ ಪರಿಣಾಮವಾಗಿ 5ರಿಂದ 6 ಮನೆಗಳಿಗೆ ಹಾನಿಯಾಗಿದೆ.
ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಹಾಗೂ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಾವಿಗೀಡಾಗಿದ್ದಾರೆ. ಮನೆಗಳ ಮೇಲೆ ವಿಮಾನ ಬಿದ್ದ ಪರಿಣಾಮವಾಗಿ 12 ಮಂದಿ ನಾಗರೀಕರು ಮೃತಪಟ್ಟರು. ಹಾಗೂ 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
Next Story