ವಿಟ್ಲ: ಹೊರೈಝನ್ ಶಾಲಾ ಮಂತ್ರಿಮಂಡಲ ರಚನೆ

ವಿಟ್ಲ, ಜು.31: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಮೇಗಿನಪೇಟೆಯಲ್ಲಿರುವ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿಮಂಡಲವನ್ನು ಇತ್ತೀಚೆಗೆ ರಚಿಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿ ಅಹ್ಮದ್ ಕಬೀರ್, 8ನೇ ತರಗತಿಯ ಹಝ್ರತ್ ಆಲಿಯಾ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಉಳಿದಂತೆ ಕ್ರೀಡಾ ಮಂತ್ರಿಯಾಗಿ ನಿಹಾಲ್, ಸಲ್ಮಾನ್ ಫಾರಿಷ್, ಸಲೀತ್, ಅನನ್. ಆಹಾರ ಮಂತ್ರಿಯಾಗಿ ಮಲ್ಲಿಕಾ ಇರಮ್, ಸುಝ್ನ, ಅನ್ಸಾರ್, ತಾನಿಶ್, ನಿಹಾನ. ಶಿಸ್ತಿನ ಮಂತ್ರಿ ಯಾಗಿ ಖದಿಜಾ ಇಶಿಕಾ ಅನಿಲಕಟ್ಟೆ, ನೌಶಾದ್, ರಿಧಾ, ತಫ್ಶೀರಾ, ಸನಾ. ನೀರಾವರಿ ಮಂತ್ರಿಯಾಗಿ ಫರಾಝ್, ಹಾಶಿರ್, ತೌಫೀಕ್, ಅವ್ವಶಫಾ. ಸ್ವಚ್ಛತಾ ಮಂತ್ರಿಯಾಗಿ ಅಝೀಂ, ತೌಹೀದ್, ಶಹೀರ ಫಾತಿಮಾ, ತಮ್ಶೀದ. ಸಾಂಸ್ಕೃತಿಕ ಮಂತ್ರಿಯಾಗಿ ಮರಿಯಂ ಶಿಫಾ, ಸನ, ಸುಝ್ನಾ, ಅಲಿಯ. ನಾಮಫಲಕದ ಉಸ್ತುವಾರಿ ಮಂತ್ರಿಯಾಗಿ ತೈಬಾ, ಝಕಿಯಾ, ಮಹ್ಸೀನ, ನಸೀಬ ಆಯ್ಕೆಗೊಂಡಿದ್ದಾರೆ.
ಮುಖ್ಯ ಶಿಕ್ಷಕಿ ವಿಲಾಸಿನಿ ಪ್ರತಿಜ್ಞಾ ವಿಧಿ ಬೋಧಿಸಿದರು.
Next Story





