ಕೇಂದ್ರದ ಆರ್ಥಿಕ ದಿವಾಳಿತನದ ವಿರುದ್ಧ ಕಾಂಗ್ರೆಸ್ ಜನರ ಧ್ವನಿಯಾಗಲಿದೆ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ
ಮಂಗಳೂರು, ಜು.31: ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಜನರ ಭಾವನಾತ್ಮಕ ನಿರ್ಧಾರಗಳಿಂದ ಕಾಂಗ್ರೆಸ್‌ಗೆ ಸೋಲಾಗಿದ್ದು, ಅಭಿವೃದ್ಧಿಯ ವಿಚಾರದಲ್ಲಿ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಕೇಂದ್ರ ಸರಕಾರದ ತಪ್ಪುಆರ್ಥಿಕ ನೀತಿಯಿಂದಾಗಿ ದೇಶವು ಇಂದು ಆರ್ಥಿಕ ದಿವಾಳಿತನಕ್ಕೆ ತಳ್ಳಲ್ಪಡುತ್ತಿದ್ದು, ಜನರ ಧ್ವನಿಯಾಗಿ ಕಾಂಗ್ರೆಸ್ ರೂಪುಗೊಳ್ಳಲಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರುಗಿದ ಕೆಪಿಸಿಸಿ ಸತ್ಯಶೋಧನಾ ತಂಡದ ಸಭೆಯ ನೇತೃತ್ವ ವಹಿಸಿ ಅವರು ಕಾಂಗ್ರೆಸ್ ಪರಾಭವದ ಕುರಿತು ಮಾತನಾಡುತ್ತಿದ್ದರು.
ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳಲ್ಲಿ ಯಶಸ್ವಿಯಾಗಿದ್ದರೂ ಬಿಜೆಪಿಯವರು ಚುನಾವಣೆಯಲ್ಲಿ ರೂಪಿಸಿದ ತಂತ್ರಗಾರಿಕೆುಂದ ವೈಫಲ್ಯ ಕಾಣುವಂತಾಯಿತು. ತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂದಡಿ ಇಡಬೇಕು ಎಂದು ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೆಪಿಸಿಸಿ ವರಿಷ್ಠರಾದ ವಿ.ಆರ್. ಸುದರ್ಶನ್, ವೀರ ಕುಮಾರ್ ಪಾಟೀಲ್, ಧ್ರುವ ನಾರಾಯಣ್, ಮಾಜಿ ಸಚಿವರಾದ ಯು.ಟಿ ಖಾದರ್, ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಮೊದಿನ್ ಬಾವ, ಜೆ.ಆರ್ ಲೋಬೊ, ಮಾಜಿ ದ.ಕ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಬ್ಲಾಕ್ ಅಧ್ಯಕ್ಷರುಗಳಾದ ವಿಶ್ವಾಸ್ ಕುಮಾರ್ ದಾಸ್, ಜೆ.ಅಬ್ದುಲ್ ಸಲೀಂ, ಸದಾಶಿವ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ವೆಲೇರಿಯನ್ ಸಿಕ್ವೇರಾ, ಮುಹಮ್ಮದ್ ಬಡಗನ್ನೂರು, ಎಂ.ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಬಿ.ಎ. ಮುಹಮ್ಮದ್ ಹನೀಫ್, ಪುರುಷೋತ್ತಮ ಚಿತ್ರಾಪುರ, ಆರ್.ಕೆ. ಪೃಥ್ವಿರಾಜ್, ಲೋಕೇಶ್ ಹೆಗ್ಡೆ, ಹಾಜಿ ಟಿ.ಎಸ್ ಅಬ್ದುಲ್ಲಾ, ಬಿ.ಎಂ ಭಾರತಿ, ರಾಜಶೇಖರ್ ಅಜ್ರಿ, ನವೀನ್ ಆರ್. ಡಿಸೋಜ, ಸಂತೋಷ್ ಕುಮಾರ್ ಶೆಟ್ಟಿ, ಯು.ಎಚ್ ಖಾಲಿದ್ ಉಜಿರೆ, ಆರೀಫ್ ಬಾವ, ನಝೀರ್ ಬಜಾಲ್, ಟಿ.ಕೆ ಸುಧೀರ್, ಆಶಾ ಡಿಸಿಲ್ವಾ, ಪ್ರೇಮ್ ಬಲ್ಲಾಳ್‌ಭಾಗ್, ನೀರಜ್‌ಪಾಲ್, ಶುಭೋದಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.







