ಟಿಪ್ಪು ಜಯಂತಿ ರದ್ದತಿಗೆ ಖಂಡನೆ
ಮಂಗಳೂರು, ಜು.31: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಎಚ್. ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಘಪರಿವಾರದ ಕೋಮು ಮನೋಭಾವನೆ ಹಾಗು ಬಿಜೆಪಿ ಸರಕಾರದ ದ್ವೇಷ ರಾಜಕೀಯದಿಂದ ಟಿಪ್ಪುಸುಲ್ತಾನ್‌ರ ಆದರ್ಶವನ್ನು ಕುಗ್ಗಿಸಲು ಸಾಧ್ಯವಿಲ್ಲ. ರಾಜ್ಯ ಸರಕಾರ ಟಿಪ್ಪುಸುಲ್ತಾನ್ ಜಯಂತಿ ಆಚರಣೆಯನ್ನು ರದ್ದುಪಡಿಸಿದ ಕ್ರಮ ಅವಿವೇಕಿತನದಿಂದ ಕೂಡಿದೆ. ಜಗತ್ತಿನಲ್ಲೇ ತನ್ನ ಶೌರ್ಯ ಮತ್ತು ಎದೆಗಾರಿಕೆ ಹಾಗು ಆಡಳಿತ ಕ್ರಮಗಳಿಗೆ ಪ್ರಸಿದ್ಧರಾದ ಟಿಪ್ಪುಸುಲ್ತಾನ್‌ರ ಕೊಡುಗೆಯನ್ನು ಗುರುತಿಸಿ ಗೌರವಿಸಬೇಕಾಗಿದ್ದ ಬಿಜೆಪಿ ಸರಕಾರ ತನ್ನ ದ್ವೇಷ ಮತ್ತು ಮತೀಯ ಕಾರಣಕ್ಕಾಗಿ ಇಂತಹ ಕೆಟ್ಟ ನಿರ್ಧಾರ ಕೈಗೊಂಡಿದೆ. ವೇದಿಕೆಯು ಸರಕಾರ ಈ ಧೋರಣೆಯ ವಿರುದ್ಧ ಜನಾಂದೋಲನ ಮತ್ತು ಕಾನೂನು ಹೋರಾಟವನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.
Next Story





