ಉಡುಪಿ: ಬುಲ್ ಟ್ರಾಲಿಂಗ್, ಬೆಳಕು ಮೀನುಗಾರಿಕೆ ನಿಷೇಧ
ಉಡುಪಿ, ಜು.31: ಕಡಲ ಮೀನುಗಾರಿಕೆ ನಿಷೇಧದ ಅವಧಿ ಇಂದಿಗೆ ಮುಕ್ತಾಯಗೊಂಡಿದ್ದು, ನಾಳೆಯಿಂದ ಹೊಸ ಮೀನುಗಾರಿಕಾ ಋತು ಪ್ರಾರಂಭಗೊಳ್ಳಲಿದೆ. ಈ ನಡುವೆ ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ಬುಲ್‌ಟ್ರಾಲಿಂಗ್ ಮೀನುಗಾರಿಕೆ, ಬೆಳಕು ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಚೌರಿ, ಚಿಂದಿ ಬಲೆ, ಕೊಳೆಯುವ ವಸ್ತುಗಳು ಹಾಗೂ ಇನ್ನಿತರ ಸಮುದ್ರ ಮಾಲಿನ್ಯ ವಸ್ತುಗಳನ್ನು/ ಪದಾರ್ಥಗಳನ್ನು ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆಬಂಡಾಸ್ ಮೀು ಹಿಡಿಯುವುದನ್ನು ನಿಷೇಧಿಸಲಾಗಿದೆ.
ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಗರಿಷ್ಟ 350 ಆಶ್ವ ಶಕ್ತಿ ಇಂಜಿನ್ ಅಳವಡಿಸಿಲು ಅನುಮತಿಸಲಾಗಿದೆ. ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಕಡ್ಡಾಯವಾಗಿ ಏಕರೂಪದ ಬಣ್ಣಹಚ್ಚಲು ಸೂಚಿಸಲಾಗಿದೆ. ಎಲ್ಲಾ ಟ್ರಾಲ್ ಮೀನುಗಾರಿಕೆ ದೋಣಿಗಳಿಗೆ ಕಡ್ಡಾಯವಾಗಿ 35 ಎಂ.ಎಂ ಅಳತೆಯ ಸ್ಕ್ವೇರ್‌ಮೆಶ್ ಕಾಡ್ ಎಂಡ್ ಬಲೆಯನ್ನು ಉಪಯೋಗಿಸುವುದು ಕಡ್ಡಾಯವಾಗಿದೆ ಎಂದು ಮೀನುಗಾರಿಕಾ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





