ಆತ್ಮಹತ್ಯೆ ಸಂದೇಶ ಕಳುಹಿಸಿ ಕಾರು ಚಾಲಕ ನಾಪತ್ತೆ
ಕುಂದಾಪುರ, ಜು.31: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊಬೈಲ್ ಸಂದೇಶ ಕಳುಹಿಸಿ ಕಾರು ಚಾಲಕರೊಬ್ಬರು ನಾಪತ್ತೆಯಾಗಿರುವ ಘಟನೆ ಜು.28ರಂದು ಕುಳ್ಳುಂಜೆ ಗ್ರಾಮದ ಮಾಂಜೂರು ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಮಿಥುನ್(29) ಎಂದು ಗುರುತಿಸಲಾಗಿದೆ. ಇವರು ಜು.28ರಂದು ಮದ್ಯಾಹ್ನ ಹಳ್ಳಾಡಿ ಪ್ರಕಾಶ ಎಂಬವರ ಕಾರಿನಲ್ಲಿ ಚಾಲಕನಾಗಿ ಸಿಗಂದೂರು ಕಡೆಗೆ ಬಾಡಿಗೆಗೆ ಹೋಗುತ್ತಿರುವುದಾಗಿ ಹೇಳಿ ಹೋದವರು ಜು.29ರಂದು ತಮ್ಮ ನಿಖಿಲ್ ಎಂಬವರ ಮೊಬೈಲ್‌ಗೆ ‘ನನ್ನನ್ನು ಯಾರೂ ಹುಡುಕಬೇಡಿ, ನಾನು ಸಾಯಲು ತೀರ್ಮಾನಿಸಿದ್ದೇನೆ. ನನ್ನ ಬೈಕ್ ಕುಂದಾಪುರ ಆದರ್ಶ ಆಸ್ಪತ್ರೆ ಬಳಿ ಇಟ್ಟಿದ್ದೇನೆ ಎಂದು ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





