ಬಿ.ಸಿ ರೋಡ್: ಎಸ್ಕೆಎಸ್ಸೆಸ್ಸೆಫ್ ಟ್ರೈಸನೇರಿಯಂ ಮೀಟ್

ಮಂಗಳೂರು : "ಅಚಲವಾದ ನಿಲುವುಗಳು ವ್ಯತ್ಯಯಗಳ ತಿದ್ದುಪಡಿಗಳು" ಎಂಬ ಘೋಷ ವಾಕ್ಯದಡಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಟ್ರೈಸನೇರಿಯಂ ಮೀಟ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಬಿ.ಸಿ ರೋಡ್ ಲಯನ್ಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮವನ್ನು ಇರ್ಷಾದ್ ದಾರಿಮಿ ಮಿತ್ತಬೈಲ್ ಉದ್ಘಾಟಿಸಿದರು. ತಝ್ಕಿಯಾ ಎಂಬ ವಿಷಯದಲ್ಲಿ ಇಬಾದ್ ಜಿಲ್ಲಾಧ್ಯಕ್ಷ ಹಸನ್ ಅರ್ಶದಿ ಹಾಗೂ ಟ್ರೈಸನೇರಿಯಂ ಯೋಜನೆಗಳು ಮತ್ತುಸಂಘಟನೆಯ ನಿಲುವುಗಳು ಎಂಬ ವಿಷಯದಲ್ಲಿ ಟ್ರೆಂಡ್ ಕೇರಳ ರಾಜ್ಯ ಸಂಚಾಲಕರಾದ ನೌಫಲ್ ಮಾಸ್ಟರ್ ವಾಗೇರಿ ವಯನಾಡ್ ವಿಷಯ ಮಂಡಿಸಿದರು.
ಈ ಸಂದರ್ಭ ಸಹಚಾರಿ ರಿಲೀಫ್ ಸೆಲ್ ಗೆ ಗರಿಷ್ಠ ಪ್ರಮಾಣದಲ್ಲಿ ಹಣ ಸಂಗ್ರಹಿಸಿ ನೀಡಿದ ವಲಯ ಸಮಿತಿಯನ್ನು ಅಮೀರ್ ತಂಙಳ್ ಕಿನ್ಯ ಅವಾರ್ಡ್ ನೀಡಿ ಗೌರವಿಸಿದರು.
ಸಭೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಕಿನ್ಶ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ತಾಜುದ್ದೀನ್ ರಹ್ಮಾನಿ ಪುತ್ತೂರು, ಶೇರಿಪ್ ಮೂಸ ಕುದ್ದುಪದವು,ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ ,ಅಬ್ದುಲ್ ರಶೀದ್ ರಹ್ಮಾನಿ ಕರಾಯ, ಇ.ಕೆ.ಅಬ್ದರ್ರಹ್ಮಾನ್ ಮುಸ್ಲಿಯಾರ್, ಅಬ್ದುಲ್ ಮಜೀದ್ ದಾರಿಮಿ ,ಪಿ.ಎ.ಮರ್ದಾಳ, ಮುಹಮ್ಮದ್ ಕುಂಞಿ ಮಾಸ್ಟರ್, ಇಕ್ಬಾಲ್ ಬಾಳಿಲ, ಆರಿಫ್ ಬಡಕಬೈಲ್ , ಜಮಾಲುದ್ದಿನ್ ದಾರಿಮಿ, ಅಶ್ರಫ್ ಕಡಬ ,ಅಶ್ರಫ್ ಕಬಕ ,ಝೈನ್ ಸಖಾಫಿ ಉಳ್ಳಾಲ, ಮುಹಮ್ಮದ್ ಹನೀಫ್ ದೂಮಳಿಕೆ,ಶರೀಫ್ ಕಕ್ಕಿಂಜೆ, ರಿಯಾಝ್ ಫೈಝಿ ಕಕ್ಕಿಂಜೆ, ಶಾಫಿ ಇರ್ಫಾನಿ ಗೂಡಿನಬಳಿ, ಫಾರೂಕ್ ವಿಶಾಲನಗರ ಮೊದಲಾದವರು ಭಾಗವಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ ವಂದಿಸಿದರು.









