ರಸ್ತೆ ಬದಿಯಲ್ಲಿದ್ದ ಬಾಂಬ್‌ಗೆ ಬಸ್ ಢಿಕ್ಕಿ; ಕನಿಷ್ಠ 28 ಸಾವು

ಹೆರಾತ್ (ಅಫ್ಘಾನಿಸ್ತಾನ), ಜು. 31: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಬುಧವಾರ ಮುಂಜಾನೆ ಬಸ್ಸೊಂದು ರಸ್ತೆಬದಿಯಿದ್ದ ಬಾಂಬ್‌ಗೆ ಢಿಕ್ಕಿ ಹೊಡೆದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಹಲವಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ.
‘‘ಕಂದಹಾರ್-ಹೆರಾತ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕ ಬಸ್ಸೊಂದು ತಾಲಿಬಾನ್ ಇಟ್ಟಿದ್ದ ರಸ್ತೆಬದಿ ಬಾಂಬ್‌ಗೆ ಢಿಕ್ಕಿ ಹೊಡೆಯಿತು. ಈವರೆಗೆ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ’’ ಎಂದು ಫರಾ ಪ್ರಾಂತದ ವಕ್ತಾರರೊಬ್ಬರು ತಿಳಿಸಿದರು.
ಮೃತಪಟ್ಟವರೆಲ್ಲರೂ ನಾಗರಿಕರು ಹಾಗೂ ಅವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಾಗಿದ್ದರು ಎಂದರು.
ಅಫ್ಘಾನಿಸ್ತಾನದ ಮೇಲೆ ಅಮೆರಿಕ 18 ವರ್ಷಗಳ ಹಿಂದೆ ಯುದ್ಧ ಆರಂಭಿಸಿದಂದಿನಿಂದ, ನಾಗರಿಕರು ಭಾರೀ ಬೆಲೆ ತೆತ್ತಿದ್ದಾರೆ.
Next Story





