ಉಳಿ, ಕುಂಟಾಲಪಲ್ಕೆ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಹೊರಸಂಚಾರ

ಬಂಟ್ವಾಳ, ಆ. 1: ಉಳಿ ದ.ಕ.ಜಿ.ಪಂ. ಶಾಸಕರ ಮಾದರಿ ಹಾಗೂ ಕುಂಟಾಲಪಲ್ಕೆ ಸರಕಾರಿ ಮಾದರಿ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರಕ್ಕೆ ಹೊರಸಂಚಾರ ಏರ್ಪಡಿಸಲಾಯಿತು.
ಗದ್ದೆಯಲ್ಲಿ ನೇಜಿ ನೆಡುವುದು, ಕಂಬಳ ಓಟದ ಪ್ರಾತ್ಯಕ್ಷಿಕೆ ಮೂಲಕ ಕೃಷಿ ಅಧ್ಯಯನ ಮಾಡಲಾಯಿತು. ಬಳಿಕ ಮನರಂಜನೆಯ ಆಟಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಉಪತಹಶೀಲ್ದಾರ್ ರೋಹಿನಾಥ್, ಬೆಳ್ತಂಗಡಿ ಕೃಷಿ ಸಂಪದ ಅಧ್ಯಕ್ಷ ಕೇಶವ ಪೂಜಾರಿ, ಉಳಿ ಗ್ರಾಪಂ ಸದಸ್ಯ ಚಿದಾನಂದ, ಉಳಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮುನ್ನ, ಕುಂಟಾಲಪಲ್ಕೆ ಎಸ್ಡಿಎಂಸಿ ಅಧ್ಯಕ್ಷ ಇಲ್ಯಾಸ್, ಸ್ಥಳೀಯರಾದ ಶ್ರೀಯಾಂಸ್ ಜೈನ್, ರೋಹಿತ್, ದಿನೇಶ್, ಉಳಿ ಶಾಲಾ ಮುಖ್ಯಶಿಕ್ಷಕ ರಾಮ ಸಾಲ್ಯಾನ್, ಕುಂಟಾಲಪಲ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸುಧಾಮ ಹಾಜರಿದ್ದರು.
Next Story





