ಮಂಗಳೂರು: ಹೆಲ್ಮೆಟ್ ಧರಿಸದ ಅರಣ್ಯ ಇಲಾಖೆ ಅಧಿಕಾರಿಗೆ ದಂಡ

ಮಂಗಳೂರು, ಆ.1: ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನದಲ್ಲಿ ಚಲಿಸಿದ ಫಾರೆಸ್ಟ್ ಗಾರ್ಡ್ ಮಹಿಳೆಯೊಬ್ಬರಿಗೆ ದಂಡ ವಿಧಿಸಿದ ಘಟನೆ ಗುರುವಾರ ನಡೆದಿದೆ.
ಉಪ್ಪಿನಂಗಡಿಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆ, ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ ಪತಿಯ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಇದನ್ನು ನೋಡಿದ ಕಾರಿನವರು ಮೊಬೈಲ್‌ನಲ್ಲಿ ಫೋಟೊ ತೆಗೆದು ‘ಖಾಕಿ ಸಮವಸ್ತ್ರ ಧರಿಸಿದ ಈ ಮಹಿಳೆ ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ‘ಟ್ರಾಫಿಕ್ ನಿಯಮ ಉಲ್ಲಂಘನೆ’ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಬಳ್ಳಾರಿ ಮೂಲದವರು
ಮೊಬೈಲ್‌ಗಳಲ್ಲಿ ಫೋಟೊ ಹರಿದಾಡುತ್ತಿದ್ದಂತೆ ನಗರ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ನಂಬರ್ ಆಧಾರದಲ್ಲಿ ಶೋಧ ನಡೆಸಿದಾಗ ವಾಹನ ಬಳ್ಳಾರಿ ಮೂಲದೆಂದು ತಿಳಿದು ಬಂದಿದೆ. ಬಳಿಕ ಮಹಿಳೆಯನ್ನು ಠಾಣೆಗೆ ಕರೆಸಿ ದಂಡ ವಿಧಿಸಿ ಕಳುಹಿಸಿರುವುದಾಗಿ ತಿಳಿದುಬಂದಿದೆ.
Next Story





