ಟ್ರಂಪ್ಗೆ ನೀಡಿರುವ ಭರವಸೆಯನ್ನು ಕಿಮ್ ಉಲ್ಲಂಘಿಸಿಲ್ಲ: ಅಮೆರಿಕ

ವಾಶಿಂಗ್ಟನ್, ಆ. 1: ಉತ್ತರ ಕೊರಿಯ ಇತ್ತೀಚೆಗೆ ನಡೆಸಿರುವ ಕ್ಷಿಪಣಿ ಪರೀಕ್ಷೆಗಳು ಆ ದೇಶದ ನಾಯಕ ಕಿಮ್ ಜಾಂಗ್ ಉನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿರುವ ಭರವಸೆಯನ್ನು ಉಲ್ಲಂಘಿಸಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಬುಧವಾರ ಹೇಳಿದ್ದಾರೆ.
ಕಿಮ್ ಮತ್ತು ಟ್ರಂಪ್ ಜೂನ್ 30ರಂದು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಉಭಯ ನಾಯಕರ ನಡುವಿನ ಸ್ಥಗಿತಗೊಂಡಿರುವ ಮಾತುಕತೆಯನ್ನು ಮುಂದುವರಿಸಲು ಅವರು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರು.
ಮಾತುಕತೆಗಳನ್ನು ಏರ್ಪಡಿಸುವುದಕ್ಕಾಗಿ ಉತ್ತರ ಕೊರಿಯದಿಂದ ನಾವು ಇನ್ನಷ್ಟೇ ಮಾಹಿತಿಗಳನ್ನು ಪಡೆಯಬೇಕಾಗಿದೆ ಎಂದು ಫಾಕ್ಸ್ ಬಿಝ್ನೆಸ್ ನೆಟ್‌ವರ್ಕ್‌ನೊಂದಿಗೆ ಮಾತನಾಡಿದ ಬೋಲ್ಟನ್ ನುಡಿದರು.
Next Story





