ವಿಕಲಚೇತನರಿಗೆ ಆಧಾರ ಗೂಡಂಗಡಿ ಸೌಲಭ್ಯ
ಉಡುಪಿ, ಆ.1:ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಜಿಲ್ಲೆಯಲ್ಲಿ, 2019-20ನೇ ಸಾಲಿನಲ್ಲಿ ವಿಕಲಚೇತನ ರಿಗೆ ಸ್ವ ಉದ್ಯೋಗ ಕೈಗೊಳ್ಳಲು ಆಧಾರ ಯೋಜನೆಯಡಿ ಪರಿಷ್ಕೃತ ನಿಯಮ ಗಳಡಿಯಲ್ಲಿ ಶೇ.50 ಬ್ಯಾಂಕಿನಿಂದ ಸಾಲ ಮತ್ತು ಶೇ.50 ಸಬ್ಸಿಡಿ ಇಲಾಖೆ ಯಿಂದ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರು ಕೂಡಾ ಹೊಸದಾಗಿ ಈ ಸಾಲಿನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಆ.10 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ, ಮಾರ್ಗಸೂಚಿ ಮತ್ತು ಮಾಹಿತಿಗಾಗಿ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ರಜತಾದ್ರಿ, ಮಣಿಪಾಲ ದೂ.ಸಂ: 0820-2574810/811ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story





